ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಶಾಕ್

ವಾಷಿಂಗ್ಟನ್,ಏಪ್ರಿಲ್,8,2026 (www.justkannada.in):  ಇರಾನ್ ಮತ್ತು ಅಮೆರಿಕ ನಡುವೆ  ಎರಡು ವಾರಗಳ ಕಾಲ ತಾತ್ಕಾಲಿಕವಾಗಿ ಕದನ ವಿರಾಮ ಏರ್ಪಟ್ಟಿದ್ದು ಈ ಮಧ್ಯೆಯೂ  , ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕ್ ನೀಡಿದ್ದಾರೆ.

ಇರಾನ್‌ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶವು ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ.50ರಷ್ಟು ಭಾರೀ ಸುಂಕ (Tariff) ವಿಧಿಸುವುದಾಗಿ ಅವರು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪೋಸ್ಟ್‌  ಮಾಡಿರುವ  ಡೊನಾಲ್ಡ್ ಟ್ರಂಪ್, ಯಾವುದೇ ದೇಶವು ಇರಾನ್‌ ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದರೆ, ಆ ದೇಶವು ಅಮೆರಿಕಕ್ಕೆ  ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ತಕ್ಷಣವೇ ಶೇ. 50ರಷ್ಟು ಸುಂಕವನ್ನು ವಿಧಿಸಲಾಗುವುದು. ಇದಕ್ಕೆ ಯಾವುದೇ ವಿನಾಯಿತಿಯಿಲ್ಲ ಎಂದಿದ್ದಾರೆ.

Key words: Donald Trump, shocks, countries, supplying, weapons , Iran