ಮಂಡ್ಯದಲ್ಲಿ ಮುಖ್ಯಮಂತ್ರಿ ಪುತ್ರನ ಸೋಲಿಗೆ ಕಾರಣವೇನು ಗೊತ್ತ…?

0
662

 

ಮಂಡ್ಯ, ಮೇ 23, 2019 : (www.justkannada.in news ) ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಈ ಪಂಚ ಅಂಶಗಳೇ ಕಾರಣವಾಯ್ತ…? ಅನ್ನೋದು ಬಹುತೇಕರ ಅಭಿಪ್ರಾಯ.

ಚುನಾವಣಾ ಅಖಾಡಕ್ಕೆ ಧುಮುಕಲು ಸುಮಲತಾ ಅಂಬರೀಶ್ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮೊದಲಿಗೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೀಡಿದ ಹೇಳಿಕೆ ಇದಕ್ಕೆ ಮೂಲವಾಯ್ತು. ‘ ಸುಮಲತಾ ಗೌಡ್ತಿ ಅಲ್ಲ, ನಾಯ್ಡು ..’ ಎನ್ನುವ ಮೂಲಕ ಮೊದಲ ಬಾರಿಗೆ ಜನರ ಮನಸ್ಸನ್ನು ಕೆಣಕಿದರು. ಬಳಿಕ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹೋದರ ಆಗಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನೀಡಿದ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯ್ತು.
‘ ಗಂಡ ಸತ್ತ ತಿಂಗಳಲ್ಲೇ ರಾಜಕೀಯಕ್ಕೆ ಬರಬೇಕಿತ್ತಾ…’ ಅನ್ನುವ ಮಾತು ಹೇಳಿದ್ದು ಮಹಿಳೆಯರ ಸಿಟ್ಟಿಗೆ ಕಾರಣವಾಯ್ತು.
ಇನ್ನು ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಅಂತು, ಸುಮಲತಾರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಲೇ ಬಂದದ್ದು ಈಗ ಭಾರಿ ಬೆಲೆ ತೆರುವಂತಾಯಿತು.
ಮತದಾನ ಮುಗಿದ ಬಳಿಕ ಸಿಂಗಾಪೂರ್ ಗೆ ಗಂಟು ಮೂಟೆ ಕಟ್ಟಿಕೊಂಡು ಹಾರ್ತಾರೆ. ಅವರೊಬ್ಬರು ಮಾಯಂಗಿನಿ ಅನ್ನುವ ಶಬ್ದ ಬಳಸಿದ ಮೇಲೆ ಇಡೀ ಕ್ಷೇತ್ರದ ಚಿತ್ರಣ ಬೇರೆ ದಿಕ್ಮಿಗೆ ಸಾಗಿತು.

ಪುತ್ರನ ಪರವಾಗಿ ಪ್ರಚಾರದ ಅಖಾಡಕ್ಕೆ ಇಳಿದು ನಿರಂತರವಾಗಿ ಪ್ರಚಾರ ಮಾಡಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ನಟರಾದ ದರ್ಶನ್-ಯಶ್ ಅವರದ್ದು ಜೋಡೆತ್ತಲ್ಲ, ಕಳ್ಳೆತ್ತುಗಳು ಅನ್ನುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ್ರು.
ಅವರು ನಕಲಿ ರೈತರು-ನಾವು ನಿಜವಾದ ರೈತರು ಅನ್ನುವ ಮೂಲಕ ದರ್ಶನ್ಗೆ ಟಾಂಗ್ ಕೊಟ್ಟ ಕುಮಾರಸ್ವಾಮಿಗೆ ದರ್ಶನ್ ಎತ್ತಿನಬಂಡಿ ಓಡಿಸುವ ಮೂಲಕ ತಿರುಗೇಟು ನೀಡಿದ್ರು. ಆ ಮೂಲಕ ಸುಮಲತಾಗೆ ಸಾಥ್ ಕೊಟ್ಟರು. ಮತದಾರರು ಸಹ ಕೈ ಹಿಡಿದು ಮಂಡ್ಯದ ಸೊಸೆ ಸ್ವಾಭಿಮಾನ ಎತ್ತಿ ಹಿಡಿದ್ರು…

key words : mandya-election-sumalatha-nikhil-darsha-yash

ENGLISH SUMMARY : 

Do you know what caused the defeat of Chief Minister’s son in Mandya?

These factors have led to the defeat of JD (S) candidate Nikhil Kumaraswamy, Mandya Lok Sabha constituency which has attracted the whole country.