ಭಾರತವನ್ನ ಪಾಕಿಸ್ತಾನವಾಗಲು ಬಿಡೋದಿಲ್ಲ-  ಸಚಿವ ಕೆ.ಎಸ್ ಈಶ್ವರಪ್ಪ.

ಬೆಳಗಾವಿ,ಡಿಸೆಂಬರ್,13,2021(www.justkannada.in):  ಪಾಕಿಸ್ತಾನದಲ್ಲಿ ಮತಾಂತರ ಹೆಸರಲ್ಲಿ ಕೊಲೆ ಸುಲಿಗೆಯಾಗ್ತಿದೆ. ಆ ರೀತಿ ನಮ್ಮ ದೇಶ ದಲ್ಲಿ ನಡೆಯೋಕೆ ಬಿಡೋದಿಲ್ಲ. ಭಾರತವನ್ನ ಪಾಕಿಸ್ತಾನವಾಗಲು ಬಿಡೋದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಮತ್ತು ಡಿಕೆಶಿಗೆ ನಾನು ಪ್ರಶ್ನೆ ಮಾಡುತ್ತೇನೆ. ಭಾರತವನ್ನ ಪಾಕಿಸ್ತಾನ ಮಾಡೋಕೆ ಹೊರಟಿದ್ದೀರಾ?. ಪಾಕಿಸ್ತಾನದಲ್ಲಿ ಮತಾಂತರ ಹೆಸರಲ್ಲಿ ಕೊಲೆ ಸುಲಿಗೆಯಾಗ್ತಿದೆ. ಪಾಕಿಸ್ತಾನದಲ್ಲಿ ಶೇ 24 ರಷ್ಟು ಹಿಂದುಗಳು ಈಗ ಶೇ 3ರಷ್ಟು ಆಗಿದ್ದಾರೆ. ಆ ರೀತಿ ನಮ್ಮ ದೇಶ ದಲ್ಲಿ ನಡೆಯೋಕೆ ಬಿಡೋದಿಲ್ಲ. ಮುಗ್ದರನ್ನ ಮತಾಂತರ ಮಾಡೋದಕ್ಕೆ ಬಿಡೋದಿಲ್ಲ ಎಂದು  ಹೇಳಿದರು.

ಆಸೆ ಆಮಿಷ ಒಡ್ಡಿ ಮಹಿಳೆಯರನ್ನು ಮತಾಂತರ‌ ಮಾಡಿ, ವಿದೇಶಕ್ಕೆ ಮಾರಾಟ ಮಾಡುವ ಉದಾಹರಣೆ ಬೇಕಷ್ಟಿದೆ. ಕಾಂಗ್ರೆಸ್ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ, ಮುಸ್ಲಿಂರನ್ನು ತೃಪ್ತಿ ಪಡಿಸಲು ಹೋಗಿ ನಿರ್ನಾಮ ಆಗುತ್ತಿದ್ದಾರೆ. ಹಿಂದೂಗಳ ಸಂಪೂರ್ಣ ರಕ್ಷಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮತಾಂತರ ಮಾಡಲು ಬಿಡುವುದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.

Key words: Do not -let -India -become –Pakistan-Minister -KS Eshwarappa.