ಡಿಕೆಶಿ ಟೀಮ್ ಬಿಜೆಪಿಗೆ ಹೋಗ್ತಾರೆ ಎಂಬ ಹೇಳಿಕೆ: ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ- ಡಿ.ಕೆ ಸುರೇಶ್

ಬೆಂಗಳೂರು,ಸೆಪ್ಟಂಬರ್,3,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಟೀಮ್ ಬಿಜೆಪಿಗೆ ಹೋಗ್ತಾರೆ ಎಂಬ ಎಂಎಲ್ ಸಿ ರಾಜೇಂದ್ರ ರಾಜಣ್ಣ ಹೇಳಿಕೆಗೆ ಟಾಂಗ್ ಕೊಟ್ಟಿರುವ ಮಾಜಿ ಸಂಸದ ಡಿ.ಕೆ ಸುರೇಶ್, ಇಬ್ಬರಿಗೂ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್,  ಎಂಎಲ್ ಸಿ  ರಾಜೇಂದ್ರ ರಾಜಣ್ಣ ಹಿರಿಯ ನಾಯಕರು ರಾಜಣ್ಣ ರಾಷ್ಟ್ರ ನಾಯಕರು.  ಇಬ್ಬರಿಗೂ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ನಮ್ಮಲ್ಲಿ ಪಿತೂರಿ ಮಾಡುವ ಜನರಿಲ್ಲ . ನಮಗೆ ಇರುವುದು ಕಾಂಗ್ರೆಸ್ ಪಕ್ಷ.  ಕಾಂಗ್ರೆಸ ಪಕ್ಷದಡಿ ಕೆಲಸ ಮಾಡುವ ಅಭ್ಯಾಸ ನಮಗಿದೆ. ಇದಕ್ಕೆ ಸಿಎಂ ಉತ್ತರಿಸುತ್ತಾರೆ. ನಾನು ಉತ್ತರಿಸಲ್ಲ ಎಂದರು.

ಕೆಎನ್ ರಾಜಣ್ಣ ಬಿಜೆಪಿ ಸೇರಲು ಅರ್ಜಿ ಹಾಕಿದ್ದಾರೆ ಎಂದು  ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಂಎಲ್ ಸಿ ರಾಜೇಂದ್ರ ರಾಜಣ್ಣ ಹೆಚ್.ಸಿ ಬಾಲಕೃಷ್ಣ ಅಂಡ್ ಟೀಮ್ ಬಿಜೆಪಿ ಸೇರುತ್ತಾರೆ. ಅದೇ ಸೆಪ್ಟಂಬರ್ ಕ್ರಾಂತಿ ಎಂದಿದ್ದರು.

Key words: Statement, DK team, BJP, DK Suresh