ಆರ್.ಧೃವನಾರಾಯಣ್ ನಿಧನದ ಸುದ್ದಿ ತಿಳಿದು ಡಿ.ಕೆ ಶಿವಕುಮಾರ್ ಕಣ್ಣೀರು.

ಮೈಸೂರು,ಮಾರ್ಚ್,11,2023(www.justkannada.in):  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ನಿಧನದ ಸುದ್ಧಿ ತಿಳಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.

ಆರ್.ಧೃವನಾರಾಯಣ್ ನೆನೆದು ಕಣ್ಣೀರಿಟ್ಟಿರುವ ಡಿ.ಕೆ ಶಿವಕುಮಾರ್,  ನನ್ನ ಸ್ವಂತ ಸಹೋದರನನ್ನೇ ಕಳೆದುಕೊಂಡಷ್ಟು ದುಃಖ ಆಗುತ್ತಿದೆ. ದೇವರ ಇದ್ದಾನೋ ಇಲ್ಲವೂ ಅನ್ನಿಸುತ್ತಿದೆ. ಧ್ರುವ ನಾರಾಯಣ್ ನಿಧನ ನನಗಷ್ಟೆ ಅಲ್ಲ. ಯಾರಿಗೂ ನಂಬಲಾಗುತ್ತಿಲ್ಲ. ಈ ಸಾವಿನ ಸುದ್ದಿ ಎಐಸಿಸಿ ಅಧ್ಯಕ್ಷರಿಗೂ ನಂಬಲು ಆಗುತ್ತಿಲ್ಲ ಪಕ್ಷಕ್ಕೆಷ್ಟೇ ಅಲ್ಲ ಇಡೀ ರಾಜ್ಯಕ್ಕೆ ನಷ್ಟ ಎಂದು ಭಾವುಕರಾದರು.

Key words: DK Sivakumar -wept – R. Dhruvanarayan-death.