ವೋಟ್ ಹಾಕಿದ್ರೆ ಮಾತ್ರ ನೀರು ಕೊಡುತ್ತೇವೆ ಎಂದು ಡಿಕೆಶಿ ಹೆದರಿಸಿದ್ದಾರೆ- ಶಾಸಕ ಅಶ್ವಥ್ ನಾರಾಯಣ್ ಕಿಡಿ.

ಬೆಂಗಳೂರು,ಏಪ್ರಿಲ್,17,2024 (www.justkannada.in):  ವೋಟ್ ಹಾಕಿದರೇ ಮಾತ್ರ ನೀರು ಕೊಡುತ್ತೇವೆ ಎಂದು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೆದರಿಸಿದ್ದಾರೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಇಂದು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಮಂಡ್ಯದಲ್ಲಿ ರಾಹುಲ್ ಗಾಂಧಿ ಅಪ್ರಸ್ತುತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ.  ತುರ್ತುಪರಿಸ್ಥಿತಿ ಮುಂತಾದ ದೌರ್ಜನ್ಯವೆಸಗಿದೆ.  ಬಡತನ ನಿರ್ಮೂನೆ ಮಾಡುವುದಾಗಿ ಮೊದಲಿನಿಂದಲೂ ಹೇಳಿತ್ತಿದ್ದಾರೆ.  ಆದರೆ ಇವರು ಮಾತ್ರ ಶ್ರೀಮಂತವಾಗಿದ್ದಾರೆ ಎಂದು ಲೇವಡಿ ಮಾಡಿದರು.

ಯುಪಿಎ ಅವಧಿಯಲ್ಲಿ ಎಷ್ಟು ಕೆಲಸವಾಗಿದೆ ಎನ್ ಡಿಎ ಅವಧಿಯಲ್ಲಿ ಎಷ್ಟು ಕೆಲಸವಾಗಿದೆ ಚರ್ಚೆಗೆ ಬರಲಿ. ಕಾಂಗ್ರೆಸ್ ನಾಯಕರು ಹೋದಲ್ಲಿ ಬಂದಲ್ಲಿ ಸುಳ್ಳು ಹೇಳುತ್ತಿದ್ದಾರೆ.  ರಾಹುಲ್ ಗಾಂಧಿ ಸಿದ್ದರಾಮಯ್ಯ ಹೇಳಿಕೆಯನ್ನ ಯಾರೂ ನಂಬಲ್ಲ ವೋಟ್ ಹಾಕಿದರೇ ಮಾತ್ರ ನೀರುಕೊಡುತ್ತೇವೆ ಎಂದು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಡಿಕೆ ಶಿವಕುಮಾರ್ ಹೆದರಿಸಿದ್ದಾರೆ. ಡಿಕೆ ಶಿವಕುಮಾರ್ ನಡೆಯನ್ನ ಜನರು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

Key words: DK shivakumar,  threatened, Ashwath Narayan