ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ- ಕೆ.ಎನ್ ರಾಜಣ್ಣ

ತುಮಕೂರು,ಡಿಸೆಂಬರ್,6,2025 (www.justkannada.in): ಡಿಕೆ ಶಿವಕುಮಾರ್ ಸಿಎಂ ಆದರೆ ಅವರ ಸಚಿವ ಸಂಪುಟದಲ್ಲಿ ನಾನು ಸಚಿವ ಆಗಲ್ಲ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ನನಗೆ ಸಚಿವ ಸ್ಥಾನ ಬೇಡ ಮತ್ತೊಬ್ಬರಿಗೆ ಅವಕಾಶ ನೀಡಲಿ. ಹಾಗಂತ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಹೇಳಿಲ್ಲ. ಅದೇನು ಸಿಎಮ ಆಗೇ ಬಿಡುತ್ತಾರೆ ಅಂದು ಕೊಡಿದ್ದೀರಾ. ನಾನು ಮೊದಲೇ ಹೇಳಿದ್ದೇನೆ ಡಿಕೆ ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ ಎಂದರು.

ತಮಗೆ  ಮತ್ತೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎನ್ ರಾಜಣ್ಣ,  ಯಾರು ನನ್ನ ಪರವಾಗಿ ಹೋರಾಟ ಮಾಡಿದ್ದಾರೋ ಅವರಿಗೆ ಚಿರಋಣಿ.  ನನಗೆ ಅಧಿಕಾರ ದಾಹ ಇಲ್ಲ. ನನ್ನ ಪರ ಅಭಿಪ್ರಾಯ ವಿಶ್ವಾಸ ವ್ಯಕ್ತಪಡಿಸುವವರಿಗೆ ಅಭಾರಿ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಅಂತಾ ತೋರಿಸಿದ್ದೀನಿ  ಎಂದರು.

Key words: DK Shivakumar, minister, CM, cabinet, K.N. Rajanna