ಮಂಡ್ಯ,ನವೆಂಬರ್,21,2025 (www.justkannada.in): ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಠಿಯಿಂದ ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಆಗ್ರಹಿಸಿದ್ದಾರೆ.
ಅಧಿಕಾರ ಹಂಚಿಕೆ ವಿಚಾರ ಚರ್ಚೆ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಶಾಸಕ ಕದಲೂರು ಉದಯ್, ಒಂದು ವೇಳೆ ನಡೆದಿದ್ದರೆ ಕೊಟ್ಟ ಮಾತಿನ್ನ ಉಳಿಸಿಕೊಳ್ಳಲಿ. ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಠಿಯಿಂದ ಡಿಕೆ ಶಿವಕುಮಾರ್ ಗೆ ಅವಕಾಶ ಕೊಡಿ ಎಂದು ಹೇಳಿದರು.
ಕೆಲ ಶಾಸಕರು ಸಚಿವರು ದೆಹಲಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಕದಲೂರು ಉದಯ್, ಗೊಂದಲಗಳಿಗೆ ತೆರೆ ಎಳೆಯುವಂತೆ ಕೇಳಲು ಹೋಗಿದ್ದಾರೆ. ಡಿನ್ನರ್ ಮೀಟಿಂಗ್ ವಿಚಾರ ಊಟಕ್ಕೆ ಸೇರುವುದು ಸಾಮಾನ್ಯ. ಹೆಚ್ಚಿನ ವಿಶೇಷತೆ ಇಲ್ಲ. ನಮ್ಮಲ್ಲಿ ಗೊಂದಲಗಳು ಇಲ್ಲ. ಗೊಂದಲ ಸೃಷ್ಠಿಸುತ್ತಿರುವುದು ವಿಪಕ್ಷ. ಗೊಂದಲಗಳಿಗೆ ತೆರೆ ಎಳೆಯಬೇಕೆಂದು ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.
Key words: Power sharing, DK Shivakumar, chance, Congress MLA







