ತುಮಕೂರು,ನವೆಂಬರ್,22,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಅವರ ಅಭಿಮಾನಿಗಳು, ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿ ತುಲಾಭಾರ ಮಾಡಿಸಿದ್ದಾರೆ.
ತುಮಕೂರಿನ ಪಾವಗಡದಲ್ಲಿ ಶನಿಮಾತ್ಮನ ದೇಗುಲದಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದು 91 ಕೆಜಿ ಎಳ್ಳಿನ ತುಲಾಭಾರ ಮಾಡಿದ್ದಾರೆ. ಹಾಗೆಯೇ ನವಗ್ರಹಗಳಿಗೆ ತೈಲಾಭಿಷೇಕ ನೆರವೇರಿಸಿದ್ದು ಡಿಕೆ ಶಿವಕುಮಾರ್ ಗೆ ಇರುವ ಶನಿ, ಕುಜದೋಷ ಪರಿಹಾರವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಅಧಿಕಾರ ಹಂಚಿಕೆಯ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದ್ದು ಅಧಿಕಾರ ಹಂಚಿಕೆಯಾಗುತ್ತದೆಯೇ ಅಥವಾ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುತ್ತಾರೆಯೇ ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕಿದೆ.
Key words: Special puja, DK Shivakumar, become, CM, supporters







