ಪ್ರಧಾನಿ ಮೋದಿ ಮನೆ ಮುಂದೆ ರಸ್ತೆ ಗುಂಡಿ ಇದ್ರೆ ಡಿಕೆಶಿ ಮನೆ ಮುಂದೆ ಹೊಂಡ ಮಾಡಿಕೊಳ್ಳಲು ಹೇಳಿ-ಸಿ.ಸಿ ಪಾಟೀಲ್ ಕಿಡಿ

ಬೆಂಗಳೂರು,ಸೆಪ್ಟಂಬರ್,23,2025 (www.justkannada.in):  ಪ್ರದಾನಿ ಮೋದಿ ಮನೆ ಮುಂದೆಯೂ ರಸ್ತೆಗುಂಡಿಗಳು ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಸಿ.ಸಿ ಪಾಟೀಲ್ , ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ರಸ್ತೆ ಗುಂಡಿಗಳಿದ್ದರೇ  ಡಿಕೆ ಶಿವಕುಮಾರ್ ತಮ್ಮ ಮನೆ ಮುಂದೆ ದೊಡ್ಡ ಹೊಂಡ ಮಾಡಿಕೊಳ್ಳಲು  ಹೇಳಿ ಇವರ ಮನೆ ಮುಂದೆ ಒಂದು ಕೆರೆ ಮಾಡಿಕೊಳ್ಳಲು ಹೇಳಿ.  ಏನಾದರೂ ಕೇಳಿದರೆ ಮೋದಿ ಮಾಡಿಲ್ಲ ನೀವು ಮಾಡಿಲ್ಲ ಅಂತಾರೆ. ನಾವು ಮಾಡದಿರುವುದಕ್ಕೆ ನೀವು ಅಧಿಕಾರಕ್ಕೆ ಬಂದಿದ್ದೀರಿ.  ಮತ್ತೆ ನೀವು ಹೋಗುವುದಕ್ಕೆ ತಯಾರಾದ್ರೆ ನಾವು ಬರುತ್ತೇವೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ವಿಚಾರ ಕುರಿತು ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ನಾನು ದೆಹಲಿಗೆ ಹೋಗಿದ್ದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿಯಲ್ಲಿಯೂ ರಸ್ತೆಗುಂಡಿಗಳಿವೆ. ದೆಹಲಿಯಲ್ಲಿ ಒಂದು ಸುತ್ತಿ ಬಂದು ನೋಡಿದೆ. ಪ್ರಧಾನಿ ಮೋದಿಯವರ ಮನೆ ಮುಂದೆಯೂ ರಸ್ತೆ ಗುಂಡಿಗಳಿವೆ. ಪ್ರಧಾನಿಗಳ ಮನೆ ಮುಂದೆ ಎಷ್ಟು ರಸ್ತೆಗುಂಡಿಗಳಿವೆ ನೋಡಿ ಎಂದಿದ್ದರು.

Key words:  pothole, PM Modi, house, DCM DK Shivakumar, CC Patil