ಡಿಕೆ ಶಿವಕುಮಾರ್ ಪಕ್ಷ ಕಟ್ಟಿಲ್ಚಾ? ಅವರು ಯಾಕೆ ಸಿಎಂ ಆಗಬಾರದು- ಡಿಕೆಶಿ ಪರ ಬಿಜೆಪಿ ಶಾಸಕ ಬ್ಯಾಟಿಂಗ್

ಬೆಳಗಾವಿ.ಡಿಸೆಂಬರ್,12,2025 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್  ಅವರು ಡಿಸಿಎಂ ಡಿಕೆ ಶಿವಕುಮಾರ್  ಪರ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಟಿ ಸೋಮಶೇಖರ್, ಡಿಕೆ ಶಿವಕುಮಾರ್ ಏಕೆ ಸಿಎಂ ಆಗಬಾರದು?  ಡಿಕೆ ಶಿವಕುಮಾರ್ ಪಕ್ಷ ಕಟ್ಟಿಲ್ವಾ?  ಶ್ರಮ ಪಟ್ಟಿಲ್ವಾ?  ಕೂಲಿ ಕೇಳುತ್ತಿದ್ದಾರೆ. ನನ್ನ ಹಣೆಯಲ್ಲಿ ಬಿಜೆಪಿಗೆ ಹೋಗಿ ಮಂತ್ರಿ ಆಗಬೇಕು ಅಂತಿತ್ತು. ಅದೇ ರೀತಿ ಡಿಕೆ ಶಿವಕುಮಾರ್ ಹಣೆಯಲ್ಲಿ ಬರೆದಿದ್ದರೆ  ಸಿಎಂ ಆಗುತ್ತಾರೆ ಎಂದರು.

ಡಿಕೆ ಶಿವಕುಮಾರ್ ಯಾಕೆ ಬಿಜೆಪಿಗೆ ಹೋಗಿ ಸಿಎಂ ಆಗುತ್ತಾರೆ. ಅಧಿವೇಶನ ನಡೆಯುತ್ತಿದೆ ಅಂತಾ ಹೈಕಮಾಂಡ್ ಸುಮ್ಮನೆ ಇದೆ.  ಅಧಿವೇಶನ ಮುಗಿಯಲಿ ತೀರ್ಮಾನ ಮಾಡುತ್ತದೆ.  ಡಿಕೆ ಶಿವಕುಮಾರ್ ನಿನ್ನೆ ಊಟಕ್ಕೆ ಕರೆದಿದ್ದರು.  ಹೋಗಿದ್ದೆ ಡಿನ್ನರ್ ನಲ್ಲಿ ಸುಮಾರು 70 ಶಾಸಕರು ಇದ್ದರು  ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು.

Key words: DK Shivakumar, become, CM, BJP, MLA