Wednesday, August 5, 2026

BDA Apartments

Home Front Page ಡಿ.ಕೆ ಶಿವಕುಮಾರ್ ಬಂಧನ ವಿಚಾರ: ಕಾಂಗ್ರೆಸ್ ನಿಂದ ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಟೀಕಿಸಿದ ಸಂಸದೆ...

ಡಿ.ಕೆ ಶಿವಕುಮಾರ್ ಬಂಧನ ವಿಚಾರ: ಕಾಂಗ್ರೆಸ್ ನಿಂದ ರಾಜಕೀಯ ಪ್ರೇರಿತ ಪ್ರತಿಭಟನೆ ಎಂದು ಟೀಕಿಸಿದ ಸಂಸದೆ ಶೋಭಾ ಕರಂದ್ಲಾಜೆ…

ಚಿಕ್ಕಮಗಳೂರು,ಸೆ,4,2019(www.justkannada.in):  ಜಾರಿ ನಿರ್ದೇಶನಾಲಯದಿಂದ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಈ ಕುರಿತು ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಂಸದೆ ಕರಂದ್ಲಾಜೆ, ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಇದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇಡಿ ಹಾಗೂ ಐಟಿ  ಕಾನೂನಿನಡಿಯೇ ಕೆಲಸ ಮಾಡುತ್ತಿದೆ. ವೈಯಕ್ತಿಕವಾಗಿ ರಾಜಕೀಯಕ್ಕೆ ಯಾವುದೇ ಕಾಮೆಂಟ್ ಮಾಡುವುದಿಲ್ಲ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ತನಿಖೆ ಇದು. ಸಮಗ್ರ ತನಿಖೆ ನಡೆಸಿದ ಮೇಲೆ ಇಡಿ ಕಾನೂನಿನ ಕ್ರಮ ಕೈಗೊಂಡಿರ ಬಹುದು. ಯುಪಿಎ ಸರ್ಕಾರದ ಅವಧಿಯಲ್ಲೂ ದೇಶದ್ಯಾಂತ ಸಾವಿರಾರು ಜನರ ಮೇಲೆ‌ ಕ್ರಮವಾಗಿದೆ. ಹಾಗಾದ್ರೆ, ಅವೆಲ್ಲಾ ರಾಜಕೀಯ ಪ್ರೇರಿತನಾ…? ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಯಾವುದೇ ಸಂಸ್ಥೆಗಳಿಗೂ ಸ್ವಯತ್ತತೆ, ಅದರದೇ ಆದ ಕಾನೂನಿದೆ. ಆದ್ರೆ ಕೇವಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಹೊತ್ತಿನಲ್ಲಿ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಹಿಂದೆಯೂ ಹಲವರು ಜೈಲಿಗೆ ಹೋಗಿದ್ದಾರೆ. ಹಲವರ ಮೇಲೆ ಅನಾವಶ್ಯಕ ಕ್ರಮಕೈಗೊಂಡಿರುವುದನ್ನು ರಾಜ್ಯ ನೋಡಿದೆ ಎಂದು ತಿಳಿಸಿದರು.

Key words: DK Shivakumar- arrest- Shobha Karandlaje-criticized – Congress –protest