Tuesday, August 4, 2026

BDA Apartments

Home Front Page ಡಿಜೆ ಹಳ್ಳಿ ಪ್ರಕರಣ : ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಡಿಕೆಶಿ ಶಿಫಾರಸು

ಡಿಜೆ ಹಳ್ಳಿ ಪ್ರಕರಣ : ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಡಿಕೆಶಿ ಶಿಫಾರಸು

ಬೆಂಗಳೂರು, ಡಿಸೆಂಬರ್,17,2020(www.justkannada.in) : ಡಿಜೆ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ 2ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದ ಕೇಸ್ ನಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊನೆಗೂ ಕ್ರಮಕ್ಕೆ ಮುಂದಾಗಿದ್ದು, ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಡಿಕೆಶಿ ಶಿಫಾರಸು ಮಾಡಿದ್ದಾರೆ.Teachers,solve,problems,Government,bound,Minister,R.Ashokಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಸೂಚಿಸಿ ಶಿವಕುಮಾರ್ ಶಿಸ್ತುಪಾಲನಾ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಗಲಭೆಯಲ್ಲಿ ತಮ್ಮ ಮನೆಗೆ ಬೆಂಕಿ ಬಿದ್ದ ನಂತರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಮ್ಮ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು.

 

 DJ village-case-Sampath Raj-Dikeshi-recommendation- crackdown
ಕೃಪೆ: Internet

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಗೂ ಮನವಿ ಮಾಡಿದ್ದರು. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ಹೈಕಮಾಂಡ್ ಮೊರೆ ಹೋಗುವುದಾಗಿಯೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

key words : DJ village-case-Sampath Raj-Dikeshi-recommendation- crackdown