Friday, September 18, 2026

BDA Apartments

ಮಾವುತರು, ಕಾವಾಡಿಗಳ ಮಕ್ಕಳಿಗೆ ಲಾ ಗೈಡ್ ವತಿಯಿಂದ ಕಿಟ್ ಹಾಗೂ ಸಿಹಿ ವಿತರಣೆ BDA ...
Home Front Page ಮಾವುತರು, ಕಾವಾಡಿಗಳ ಮಕ್ಕಳಿಗೆ ಲಾ ಗೈಡ್ ವತಿಯಿಂದ ಕಿಟ್ ಹಾಗೂ ಸಿಹಿ ವಿತರಣೆ

ಮಾವುತರು, ಕಾವಾಡಿಗಳ ಮಕ್ಕಳಿಗೆ ಲಾ ಗೈಡ್ ವತಿಯಿಂದ ಕಿಟ್ ಹಾಗೂ ಸಿಹಿ ವಿತರಣೆ

ಮೈಸೂರು,ಅಕ್ಟೋಬರ್,14,2024 (www.justkannada.in): ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ಮುಗಿಸಿ ನಾಡಿನಿಂದ ಕಾಡಿಗೆ ಹೊರಟ ಗಜಪಡೆಯ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಹಾಗೂ ಓಎಂಜಿ ವೆಂಚರ್ಸ್ ವತಿಯಿಂದ ಕಿಟ್ ವಿತರಿಸಲಾಯಿತು.

ಮಕ್ಕಳಿಗೆ ಆಟದ ಸಾಮಾಗ್ರಿ ಹಣ ಉಳಿತಾಯ ಮಾಡಲು ಗೋಲಕ ಸೇರಿದಂತೆ ಪೆನ್ನು ಪೆನ್ಸಿಲ್ ಒಳಗೊಂಡ ಕಿಟ್ ವಿತರಿಸಲಾಯಿತು. ಅರಮನೆ ಆವರಣದಲ್ಲಿ ಲಾಗೈಡ್ ಗೌರವ ಸಂಪಾದಕರು ಹಿರಿಯ ವಕೀಲರು ಆದ ಲಾ ಗೈಡ್ ವೆಂಕಟೇಶ್,  ಉದ್ಯಮಿ ಬಿ.ವಿ ಶಿವಾನಂದ್ ಕಿಟ್ ವಿತರಿಸಿದರು.

ಇದೇ ವೇಳೆ ಮಕ್ಕಳಿಗೆ ದ್ರಾಕ್ಷಿ ಗೋಡಂಬಿ ಸ್ವೀಟ್ ಹಾಗೂ ಬಿಸ್ಕೆಟ್ ಪ್ಯಾಕೇಟ್ ಹಾಗೂ ಮಹಿಳೆಯರಿಗೆ ಬಳೆ ಸಹ  ನೀಡಲಾಯಿತು.

Key words: Distribution, kit, sweets, Mahuta, Kavadis, children, Law guide