ಕೊರೊನಾ ಕುರಿತು ಕರಪತ್ರ ಹಂಚಿ, ಮಾಸ್ಕ್ ವಿತರಿಸಿ ಪೊಲೀಸರಿಂದ ಜಾಗೃತಿ

ಮೈಸೂರು,ನವೆಂಬರ್,19,2020(www.justkannada.in) ; ಉದ್ಯಾನವನ, ಆಟದ ಮೈದಾನಗಳಲ್ಲಿ ಪೊಲೀಸ್ ಸಿಬ್ಬಂದಿ ತೆರಳಿ ಕರಪತ್ರಗಳನ್ನು ಹಂಚಿ, ಮಾಸ್ಕ್ ವಿತರಣೆ ಮಾಡಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.kannada-journalist-media-fourth-estate-under-lossಕೊರೋನಾ ಮುಕ್ತ ಮೈಸೂರು ಮಾಡಲು ಪೊಲೀಸರು ಪಣ ತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಪ್ರತಿದಿನ ನಗರದ ವಿವಿಧಡೆ ಸಾರ್ವಜನಿಕರಿಗೆ ಕೊರೋನಾ ಕುರಿತು ಅರಿವು ಮೂಡಿಸುತ್ತಲೇ ಇದ್ದಾರೆ. ಅದರಂತೆ ಇಂದು ಪ್ರಮುಖ ಉದ್ಯಾನವನ, ಮೈದಾನಗಳಿಗೆ ತೆರಳಿ ಸಾರ್ವಜನಿಕರಿಗೆ ಕೊರೊನಾ ಕುರಿತು ಎಚ್ಚರಿಕೆವಹಿಸುವಂತೆ ಅರಿವು ಮೂಡಿಸಿದರು.

Distribute-pamphlets-Corona-distribute-mask-raise-awareness-police

ಈ ಕಾರ್ಯದಲ್ಲಿ ನಗರದ ಎಲ್ಲಾ ಠಾಣೆಗಳ ಎಸಿಪಿ, ಇನ್ ಸ್ಪೆಕ್ಟರ್, ಸಿಬ್ಬಂದಿಗಳು ಭಾಗವಹಿಸಿ ಮಾಸ್ಕ್ ಧರಿಸದೆ ವಾಕ್ ಮಾಡುತ್ತಿದ್ದ ಜನರಿಗೆ ದಂಡ ವಿಧಿಸದೇ ಎಚ್ಚರಿಕೆ ನೀಡಿ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.

ಪೊಲೀಸರ ಈ ಜಾಗೃತಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಕುಕ್ಕರಹಳ್ಳಿ ಕೆರೆ, ಲಿಂಗಾಬುದಿ ಕೆರೆ, ಒವಲ್ ಗ್ರೌಂಡ್, ರಿಂಗ್ ರೋಡ್, ಲಲಿತ ಮಹಲ್ ಗ್ರೌಂಡ್ , ಚಾಮುಂಡಿ ಬೆಟ್ಟದ ಪಾದದ ಬಳಿ ಸೇರಿದಂತೆ ಜನರು ಹೆಚ್ಚಾಗಿ ಸೇರುವ ಕಡೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

Distribute-pamphlets-Corona-distribute-mask-raise-awareness-police

key words : Distribute-pamphlets-Corona-distribute-mask-raise-awareness-police