Sunday, September 20, 2026

BDA Apartments

ಫೋನ್ ಟ್ಯಾಪಿಂಗ್ ಕೇಸ್ ಸಿಬಿಐಗೆ ನೀಡಿದ್ದು ಸ್ವಾಗತಾರ್ಹ: ಬಿವೈ ವಿಜಯೇಂದ್ರ ಭ...
Home Front Page ಫೋನ್ ಟ್ಯಾಪಿಂಗ್ ಕೇಸ್ ಸಿಬಿಐಗೆ ನೀಡಿದ್ದು ಸ್ವಾಗತಾರ್ಹ: ಬಿವೈ ವಿಜಯೇಂದ್ರ ಭೇಟಿ ಬಳಿಕ ಅನರ್ಹ ಶಾಸಕ...

ಫೋನ್ ಟ್ಯಾಪಿಂಗ್ ಕೇಸ್ ಸಿಬಿಐಗೆ ನೀಡಿದ್ದು ಸ್ವಾಗತಾರ್ಹ: ಬಿವೈ ವಿಜಯೇಂದ್ರ ಭೇಟಿ ಬಳಿಕ ಅನರ್ಹ ಶಾಸಕ ಮುನಿರತ್ನ ಹೇಳಿಕೆ…

ಬೆಂಗಳೂರು,ಆ,19,2019(www.justkannada.in):  ಫೋನ್ ಕದ್ಧಾಲಿಕೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿದ್ದು ಸ್ವಾಗತಾರ್ಹ ಎಂದು ಅನರ್ಹ ಶಾಸಕ ಮುನಿರತ್ನ ತಿಳಿಸಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಲು ಅನರ್ಹ ಶಾಸಕ ಮುನಿರತ್ನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಆಗಲೇ ವಿಧಾನಸೌಧಕ್ಕೆ ತೆರಳಿದ್ದರು. ಈ ಹಿನ್ನೆಲೆ ನಿವಾಸದಲ್ಲಿ ಬಿವೈ ವಿಜಯೇಂದ್ರ ಅವರನ್ನ ಭೇಟಿಯಾಗಿ ಮಾಜಿ ಡಿಸಿಎಂ ಆರ್. ಅಶೋಕ್ ಸಮ್ಮುಖದಲ್ಲಿ ಚರ್ಚೆ ನಡೆಸಿದ್ದಾರೆ. ಸಂಪುಟದಲ್ಲಿ ಸ್ಥಾನದ ವಿಚಾರದ ಬಗ್ಗೆ ಚರ್ಚೆ ನಡೆದಿದ್ದಾರೆ ಎನ್ನಲಾಗಿದೆ.

ಬಳಿಕ ಮಾತನಾಡಿದ ಮುನಿರತ್ನ ಅವರು, ಹಲವರ ಫೋನ್ ಕದ್ಧಾಲಿಕೆ ಆಗಿತ್ತು. ಆದರೆ ಅದಕ್ಕೆ ಸೂಕ್ತ ದಾಖಲೆಗಳು ಸಿಕ್ಕಿರಲಿಲ್ಲ. ಆದರೆ ಈಗ ಅದಕ್ಕೆ ದಾಖಲೆಗಳು ಸಿಕ್ಕಿವೆ.  ಹೀಗಾಗಿ ಪ್ರಕರಣವನ್ನ ಸಿಬಿಐಗೆ ವಹಿಸಿದ್ದನ್ನ ಸ್ವಾಗತಿಸುತ್ತೇನೆ ಎಂದು ಹೇಳಿದರು.

Key words: disqualified-MLA-Muniratna-meet-by vijeyendra-bangalore