ಭ್ರಷ್ಟಾಚಾರದ ಬಗ್ಗೆ ನೀಡಿದ್ದ ದೂರು ಕುರಿತು ವಾಟ್ಸಪ್ ನಲ್ಲಿ ಚರ್ಚೆ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಎಂ.ರವೀಂದ್ರ ದೂರು.

ಮೈಸೂರು,ನವೆಂಬರ್,30,2022(www.justkannada.in): ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ  ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಭ್ರಷ್ಟಾಚಾರದ  ಬಗ್ಗೆ ನೀಡಿದ್ದ ದೂರಿನ ಕುರಿತು ಪಿಡಿಒ ಸಂಘದ ವಾಟ್ಸಪ್ ಗ್ರೂಪ್ ನಲ್ಲಿ ಚರ್ಚಿಸುವ ಮೂಲಕ  ಭ್ರಷ್ಟಾಚಾರ ಅವ್ಯವಹಾರಕ್ಕೆ ಬೆಂಬಲಿಸುವ ರೀತಿ  ಪರಸ್ಪರ ಅವರವರೇ ಮಾತನಾಡಿದ್ದು, ಈ ಸಂಬಂಧ  ಆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ  ಸಾಮಾಜಿಕ ಕಾರ್ಯಕರ್ತ ಎಂ.  ರವೀಂದ್ರ  ಅವರು, ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗೆ ದೂರು ನೀಡಿದ್ದಾರೆ.

ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಲವಾಲ, ಧನಗಳ್ಳಿ ಗೋಪಾಲಪುರ, ಬೀರಿಹುಂಡಿ ಗ್ರಾಮಪಂಚಾಯತಿಯ ಆಡಿಟ್ ಅನ್ನು ಎಜಿ ಆಡಿಟ್ ಮಾಡಿಸುವಂತೆ, ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ಎಂ. ರವೀಂದ್ರ ದೂರು ನೀಡಿದ್ದರು.

ಎಂ. ರವೀಂದ್ರ ನೀಡಿದ್ಧ ದೂರಿನ ಬಗ್ಗೆ ಪಿಡಿಒ ಸಂಘದ  ವಾಟ್ಸಪ್ ಗ್ರೂಪ್ ನಲ್ಲಿ  ಭ್ರಷ್ಟಾಚಾರ,  ಅವ್ಯವಹಾರಕ್ಕೆ ಬೆಂಬಲಿಸುವ ರೀತಿ ಅಧಿಕಾರಿಗಳು ಚರ್ಚಿಸಿದ್ದಾರೆಂದು ಆರೋಪ ಕೇಳಿ ಬಂದಿದೆ.

ಈ ಕುರಿತು ಮೈಸೂರು ಜಿಲ್ಲಾ ಪಂಚಾಯತ್ ಸಿಇಒಗೆ ದೂರು ನೀಡಿರುವ ಎಂ.ರವೀಂದ್ರ,,  ಮೈಸೂರು ತಾಲ್ಲೂಕು ಕೀಳನಪುರ ಗ್ರಾಮಪಂಚಾಯತಿಯ 2021-22 ನೇ ಸಾಲಿನ ಆಡಿಟ್ ಅನ್ನು ಎ ಜಿ ಆಡಿಟ್ ಮಾಡಿಸುವುದರ ಸಹಿತ ನಮ್ಮ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು .ಭ್ರಷ್ಟಾಚಾರ ನಡೆಸಿರುವ ಬಗ್ಗೆ ಹೆಚ್ಚುವರಿಯಾಗಿ ಮಾಹಿತಿ ಕಲೆ ಹಾಕಲು ದಿನಾಂಕ 26/11/2022 ರಿಂದ 27/11/2022 ರವರೆಗಿನ PDO ರವರ ಸಂಘದ ವಾಟ್ಸಪ್ ಗ್ರೂಪಿನಲ್ಲಿ ಮೈಸೂರು ಜಿಲ್ಲೆಯ ವಿವಿಧ ಗ್ರಾಮಪಂಚಾಯತಿಯ PDO ರವರ WHATSAPP CONVERSATION ಪಡೆದುಕೊಳ್ಳಲಾಗಿದೆ.

ಈ ವಾಟ್ಸಪ್ ಗ್ರೂಪ್ ನಲ್ಲಿ ತಾವು ಲಂಚ ಕೊಟ್ಟಿರುವುದಕ್ಕೆ ,  ಭ್ರಷ್ಟಾಚಾರ ನಡಿಸಿರುವುದಕ್ಕೆ ಸಮರ್ಥನೆಯನ್ನು ನೀಡುತ್ತಾ, ಯಾವ ಅಧಿಕಾರಿ ಮಾಹಿತಿಯನ್ನು ನನಗೆ ನೀಡಿದರೂ ಅವರ ವಿರುದ ಹಾಗೂ ನನ್ನ ವಿರುದ್ಧ PDO ಸಂಘದವರು ಸಂಘಟಿತರಾಗಿ ಹೋರಾಟ ನಡೆಸಲು ಭ್ರಷ್ಟ ಅಧಿಕಾರಿಗಳು ಸಂಚು ರೂಪಿಸಿರುವುದು ನನ್ನ ಗಮನಕ್ಕೆ ಬಂದಿದೆ.  ಇದರಲ್ಲಿ ಕೆಲವೊಂದು ಮಾಹಿತಿಯನ್ನು ಅಡಕಗೊಳಿಸಿ ತಮ್ಮ ಮುಂದಿನ ಕ್ರಮಕ್ಕೆ ಸಲ್ಲಿಸುತ್ತಿದ್ದೇನೆ.  ತಾವು ಈ ಬಗ್ಗೆ ಸಂಬಂಧಪಟ್ಟ CYBER CRIME  ಪೊಲೀಸ್ ಇಲಾಖೆಗೆ ದೂರು ನೀಡಿ ಮಾಹಿತಿ ತರಿಸಿಕೊಂಡು. ಈ ಗ್ರಾಮಪಂಚಾಯಿತಿಗಳ 2021-22 ಸಾಲಿನ ಆಡಿಟ್ ಅನ್ನು ಸಹ ಎಜಿ ಆಡಿಟ್‌ ಮಾಡಿಸಿ ದುರ್ಬಳಕೆ ಆಗಿರುವ ಸರ್ಕಾರಿ ಹಣಕ್ಕೆ ನ್ಯಾಯ ಒದಗಿಸಿಬೇಕು. ಅಲ್ಲದೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಎಂ.ರವೀಂದ್ರ ಮನವಿ ಮಾಡಿದ್ದಾರೆ.

Key words: Discussion – WhatsApp – complaint – corruption- M. Ravindra -Mysore

ENGLISH SUMMARY..

Discussion on complaint against corruption in WhatsApp: M. Ravindra demands disciplinary action against corrupt officials
Mysuru, November 30, 2022 (www.justkannada.in): A WhatsApp discussion between the PDOs group in their WhatsApp group, regarding the charges of corruption in the Gram Panchayats in the Mysuru Taluk Panchayat limits has revealed that many of them have defended their actions and supported corruption. Social Activist M. Ravindra has lodged a complaint with the ZP CEO, Mysuru, demanding disciplinary action against the PDOs.
In his complaint, M. Ravindra had demanded disciplinary action against the corrupt officials and to conduct an audit of the Ilwala, Dhanagalli, Gopalapura, Beerihundi Gram Panchayats in the Mysuru Taluk Panchayat limits.
Following this a discussion has taken place between the PDOs on their WhatsApp group and many of them had texted supporting corruption, it is alleged.
Keywords: PDOs/ WhatsApp/ discussion/ corruption