ಬೆಳಗಾವಿ,ಡಿಸೆಂಬರ್,17,2025 (www.justkannada.in): ಕೇಂದ್ರ ಸರಕಾರದಿಂದ ಮನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಮೊದಲಿನಿಂದಲೂ ಅವರಿಗೆ ಮಹಾತ್ಮ ಗಾಂಧೀಜಿ ಮೇಲೆ ವೈರತ್ವ ಇತ್ತು. ಮಹಾತ್ಮ ಗಾಂಧೀಜಿ ಮನರೇಗಾ ಯೋಜನೆ ಬಡವರಿಗಾಗಿ ಜಾರಿ ಮಾಡಲಾಗಿದೆ. ಅದನ್ನು ಏಕೆ ಬದಲಾವಣೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಬಿಜೆಪಿಗರಿಗೆ ಗಾಂಧೀಜಿ, ನೆಹರು ಬಗ್ಗೆ ವೈರತ್ವ ದ್ವೇಷವಿದೆ. ಬಿಜೆಪಿಯವರು ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಗೆ ಕೇವಲ 25 % ಹಣ ಕೊಡುತ್ತಾರೆ. ಪ್ರಧಾನಿ ಮೋದಿ ಪ್ರಥಮ ಭಾಷಣದಲ್ಲಿ ಮನರೇಗಾ ಟೀಕೆ ಮಾಡಿದ್ದರು. ಗಾಂಧೀಜಿ ಹೆಸರಿನ ಬಗ್ಗೆ ಬಿಜೆಪಿಯವರಿಗೆ ಪ್ರೀತಿ ಇಲ್ಲ. ಕಾರ್ಮಿಕ ವರ್ಗಕ್ಕೆ ಕೂಲಿ ಹಣ ಹೆಚ್ಚಾಗಲು ಈ ಯೋಜನೆ ಕಾರಣ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.
Key words: Minister, Dinesh Gundu Rao, Centre, change, MNREGA scheme







