DAVP ಅನ್ವಯದಂತೆ ರಾಜ್ಯದಲ್ಲೂ “ಡಿಜಿಟಲ್‌ ಜಾಹಿರಾತು ನೀತಿ”  ಜಾರಿ : ಸಿಎಂ ಸಿದ್ದರಾಮಯ್ಯ.

The advertising rates are fixed as per the category fixed by the Central Government BOC (DAVP) based on the number of viewers of the digital media and accordingly, the department will release advertisements transparently to the digital media in necessary cases. The digital advertising agencies empanelled in the department will be considered for advertising as per the rules.

 

ಬೆಂಗಳೂರು, ಡಿ.೧೫,೨೦೨೫:  ಸುದ್ಧಿ ಪೋರ್ಟಲ್‌ ಗಳಿಗೆ ಜಾಹಿರಾತು ನೀಡಲು ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ- 2024 ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ ನಲ್ಲಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮ ಕ್ಷೇತ್ರದಿಂದ ವಿಧಾನ ಪರಿಷತ್‌ ಗೆ ನಾಮ ನಿರ್ದೇಶನಗೊಂಡಿರುವ ಹಿರಿಯ ಪತ್ರಕರ್ತ ಡಾ.ಕೆ.ಶಿವಕುಮಾರ್‌ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಉತ್ತರಗಳು ಹೀಗಿದೆ..

ಡಿಜಿಟಲ್ ಮಾಧ್ಯಮಗಳು ಹೊಂದಿರುವ ವೀಕ್ಷಕರ ಸಂಖ್ಯೆಗನುಗುಣವಾಗಿ ಕೇಂದ್ರ ಸರ್ಕಾರದ BOC (DAVP) ನಿಗದಿ ಪಡಿಸಿರುವ ಕ್ಯಾಟಗರಿ ಅನ್ವಯ ಜಾಹೀರಾತು ದರಗಳನ್ನು ನಿಗದಿಪಡಿಸಲಾಗುತ್ತಿದ್ದು ಅದರಂತೆ ಇಲಾಖೆ ಅಗತ್ಯ ಸಂದರ್ಭಗಳಲ್ಲಿ ಡಿಜಿಟಲ್ ಮಾಧ್ಯಮಗಳಿಗೆ  ಪಾರದರ್ಶಕವಾಗಿ ಜಾಹೀರಾತು ಬಿಡುಗಡೆ ಮಾಡಲಾಗುವುದು.

ಇಲಾಖೆಯಲ್ಲಿ ಎಂಪ್ಯಾನಲ್ ಆಗುವ ಡಿಜಿಟಲ್ ಜಾಹೀರಾತು ಸಂಸ್ಥೆಗಳಿಗೆ ನಿಯಮಾನುಸಾರ ಜಾಹೀರಾತು ನೀಡಲು ಪರಿಗಣಿಸಲಾಗುತ್ತದೆ.

ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರದಿಂದ Stake holder Consultation ನಡೆಸುವ ಬಗ್ಗೆ, ಸದ್ಯಕ್ಕೆ ಯಾವುದೇ ವೇಳಾ ಪಟ್ಟಿ ಇರುವುದಿಲ್ಲ.

ರಾಜ್ಯದಲ್ಲಿ ವಾರ್ತಾ ಇಲಾಖೆಯ ಮಾನ್ಯತೆ ಪಟ್ಟಿಯಲ್ಲಿ ಇಲ್ಲದ ಒಟ್ಟು ಪತ್ರಿಕೆಗಳು ಎಷ್ಟು ಹಾಗೂ ಎಷ್ಟು ಜನ ಪತ್ರಕರ್ತರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಮಾನ್ಯತಾ ಪಟ್ಟಿಯಲ್ಲಿ ಇಲ್ಲದ ಪತ್ರಿಕೆಗಳ ಲಭ್ಯವಿರುವುದಿಲ್ಲ ಎಂದು ಉತ್ತರಿಸಿದ್ದಾರೆ.

ಎಲ್ಲಾ ಪತ್ರಕರ್ತರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರ ಒಂದು ಸಮೀಕ್ಷೆಯನ್ನು ನಡೆಸಲು ಶ್ರಮ ವಹಿಸುವುದೇ  ಎಂಬ ಪ್ರಶ್ನೆಗೆ, ಈಗಾಗಲೇ ರಾಜ್ಯದಲ್ಲಿ ಪತ್ರಕರ್ತರನ್ನೂ ಒಳಗೊಂಡಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿರುವುದರಿಂದ ಪತ್ರಕರ್ತರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತು ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ.

ನಿವೃತ್ತಿ ಹೊಂದಿರುವ ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡುವ ವ್ಯವಸ್ಥೆಯಿದ್ದು, ಇದನ್ನು ಪಡೆಯಲು ನಿಯಮಗಳನ್ನು ಕಠಿಣ ರೂಪಿಸಲಾಗಿದೆ ಎಂಬುದು ನಿಜವೇ  ಎಂಬ ಪ್ರಶ್ನೆಗೆ, ರಾಜ್ಯದಲ್ಲಿನ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ ನೀಡಲು ಸರ್ಕಾರದ ಆದೇಶ ಸಂಖ್ಯೆ : ಐಡಿಇವೆ 159 ಪಿಐಎಸ್ 1983 ದಿನಾಂಕ:10-02-1984ರನ್ವಯ ನಿಯಮಾವಳಿಗಳನ್ನು ರೂಪಿಸಿದ್ದು ಸದರಿ ನಿಯಮಗಳನ್ನು ಯೋಜನೆಯ ಉದ್ದೇಶವು ದುರುಪಯೋಗವಾಗದಂತೆ ಹಾಗೂ ನಿಜವಾಗಿಯೂ ಅವಶ್ಯಕತೆಯಿರುವ ಅರ್ಹರಿಗೆ ಈ ಸೌಲಭ್ಯವು ದೊರಕುವಂತಾಗಲು ಕಾಲಕಾಲಕ್ಕೆ ಸರಳೀಕರಿಸಿ ಪರಿಷ್ಕರಿಸಲಾಗುತ್ತಿದೆ ಎಂದಿದ್ದಾರೆ.

key words: “Digital Advertising Policy”, implemented, as per DAVP, CM Siddaramaiah.

SUMMARY:

“Digital Advertising Policy” to be implemented in the state as per DAVP: CM Siddaramaiah.

The advertising rates are fixed as per the category fixed by the Central Government BOC (DAVP) based on the number of viewers of the digital media and accordingly, the department will release advertisements transparently to the digital media in necessary cases. The digital advertising agencies empanelled in the department will be considered for advertising as per the rules.