ಕಷ್ಟ ಆದ್ರೆ ಅವರ ದಾರಿ ಅವರೇ ನೋಡಿಕೊಳ್ಳಲಿ: ಸಿಎಂ ಗೆ ತೊಂದರೆ ಕೊಡೋದು ಬೇಡ- ‘ಕೈ’ ನಾಯಕರಿಗೆ ಜೆಡಿಎಸ್ ಮುಖಂಡ ತಿರುಗೇಟು..

ಬೆಂಗಳೂರು,ಮೇ,13,2019(www.justkannada.in): ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರೇ ಸಿಎಂ ಮಾಡ್ತೀವಿ ಅಂತಾ ಬಂದಿದ್ರು. ಕಷ್ಟ ಆದ್ರೆ ಅವರ ದಾರಿ ಅವರೇ ನೋಡಿಕೊಳ್ಳಲಿ ಎಂದು ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ,  ಜೆಡಿಎಸ್ ಗೆ ಎರಡು ಪಕ್ಷಗಳಿಗಿಂತ ಕಡಿಮೆ ಸೀಟು ಬಂದಿರೋದು ನಿಜ. ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರೇ ಸಿಎಂ ಮಾಡ್ತೀವಿ ಅಂತಾ ಬಂದಿದ್ದರು. ಗುಲಾಂನಬಿ ಅಜಾದ್ ಮಾತುಕತೆ ವೇಳೆ ನಾನೂ ಸಹ ಇದ್ದೆ  ಆದರೆ ಈಗ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗೆಯೇ ಮೈತ್ರಿ ಕಷ್ಟ ಆದರೇ ಅವರ ದಾರಿ ಅವರೇ ನೋಡಿಕೊಳ್ಳಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತೊಂದರೆ ಕೊಡೊದು ಬೇಡ ಎಂದು ಕುಪೇಂದ್ರ ರೆಡ್ಡಿ ನುಡಿದರು.

Key words difficult -their –lead-Do not -disturb – CM-JDS leader