ಮಳೆಯಿಂದ ಮರಬಿದ್ದು ಮೃತಪಟ್ಟ ವ್ಯಕ್ತಿಯ ನಿವಾಸಕ್ಕೆ ಭೇಟಿ ನೀಡಿ 5 ಲಕ್ಷ ರೂ. ಪರಿಹಾರ ನೀಡಿದ ಮಾಜಿ ಸಿಎಂ ಹೆಚ್.ಡಿಕೆ.

ರಾಮನಗರ ಆಗಸ್ಟ್,30,2022(www.justkannada.in):  ಮಳೆಯಿಂದಾಗಿ ಆಲದ ಮರ ಬಿದ್ದು ನಿನ್ನೆ ಮೃತಪಟ್ಟ ಬೋರೇಗೌಡ ಅವರ ನಿವಾಸಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.

ರಾಮನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆಗಳಲ್ಲಿ ನೀರು ನಿಂತು ಜನರು ಸಾಕಷ್ಟು ತೊಂದರೆ ಅನುಭವಿಸಿದ್ಧಾರೆ. ಈ ನಡುವೆ ನಿನ್ನೆ ತೊರೆದೊಡ್ಡಿಯಲ್ಲಿ ಆಲದ ಮರ ಬಿದ್ದು ಬೋರೇಗೌಡ ಮೃತಪಟ್ಟಿದ್ದರು.

ಇಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬೋರೇಗೌಡರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

Key words: died –person-ramanagar-Former CM- HDK-visit