Thursday, August 13, 2026

BDA Apartments

Home Crime ಮದುವೆ ಆರತಕ್ಷತೆ ವೇಳೆಯೇ ಹೃದಯಾಘಾತದಿಂದ ವರ ಸಾವು.

ಮದುವೆ ಆರತಕ್ಷತೆ ವೇಳೆಯೇ ಹೃದಯಾಘಾತದಿಂದ ವರ ಸಾವು.

ವಿಜಯನಗರ,ಜುಲೈ,21,2022(www.justkannada.in):  ಮದುವೆ ಆರತಕ್ಷತೆ ನಡೆಯುತ್ತಿದ್ದ ವೇಳೆಯೇ ವರ ಹೃದಯಾಘಾತದಿಂದ  ಸಾವನ್ನಪ್ಪಿರುವ ಘಟನೆ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊನ್ನೂರ ಸ್ವಾಮಿ (26) ಹೃದಯಾಘಾತದಿಂದ  ಮೃತಪಟ್ಟ ವರ. ಮದುವೆಯ ಅರತಕ್ಷತೆ ನಡೆಯುತ್ತಿದ್ದ ವೇಳೆ ವರ ಹೊನ್ನೂರ ಸ್ವಾಮಿ ಎದೆ ನೋವಿನಿಂದ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡ ಹೊನ್ನೂರಸ್ವಾಮಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸಲಹೆ ನೀಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ವರ ಹೊನ್ನೂರಸ್ವಾಮಿ ಸಾವನ್ನಪ್ಪಿದ್ದಾರೆ. ಮದುವೆಯ ಸಂಭ್ರಮದ ಮನೆಯಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ.

Key words:  died – heart attack – wedding- reception