ಧ್ರುವ ನಾರಾಯಣ್ ಅಂತಿಮ ದರ್ಶನಕ್ಕೆ ಜನ ಸಾಗರ: ಸೂಕ್ತ ಬಂದೋಬಸ್ತ್ ವ್ಯವಸ್ತೆ ಮಾಡದ ಪೊಲೀಸರಿಗೆ ಯತೀಂದ್ರ ಸಿದ್ದರಾಮಯ್ಯ ಕ್ಲಾಸ್.

ಮೈಸೂರು,ಮಾರ್ಚ್,11,2023(www.justkannada.in):   ಇಂದು ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಅಂತಿಮ ದರ್ಶನ ಪಡೆಯಲು ಜನ ಸಾಗರವೇ ಹರಿದು ಬರುತ್ತಿದ್ದು ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮೈಸೂರು, ಚಾಮರಾಜನಗರದ ಜನಮಾನಸದಲ್ಲಿ ನೆಚ್ಚಿನ ನಾಯಕನಾಗಿದ್ದ ಧ್ರುವನಾರಾಯಣ್ ಅವರನ್ನ ಕಳೆದುಕೊಂಡು ಅಭಿಮಾನಿ ಬಳಗ ದುಃಖಿತರಾಗಿದ್ದು, ಅಂತಿಮ ದರ್ಶನ ಪಡೆಯುವುದಕ್ಕಾಗಿ  ಚಾಮರಾಜನಗರ ಜಿಲ್ಲೆಯ ಜನರು ಮೈಸೂರಿನತ್ತ ದೌಡಾಯಿಸುತ್ತಿದ್ದಾರೆ.

ಜನರ ನಿಯಂತ್ರಣ ಮಾಡಲು ಪೋಲಿಸರ ಹರ ಸಾಹಸಪಡುತ್ತಿದ್ದು, ಮನೆ ಮುಂದೆ ಸಾವಿರಾರು ಸಂಖ್ಯೆ ಜನ ಸೇರಿ ನೂಕು ನುಗ್ಗಲು ಉಂಟಾಗಿದೆ. ಸ್ಥಳದಲ್ಲಿ ಗಂಟೆ ಗಂಟೆಗೂ ಜನಸ್ತೋಮ ಹೆಚ್ಚಾಗುತ್ತಿದ್ದು, ಸರಿಯಾದ ಪ್ಲಾನ್ ಇಲ್ಲದೆ ಜನರ ನಿಯಂತ್ರಣ ತರಲು ಪೋಲಿಸರು ಪರದಾಟ ನಡೆಸುತ್ತಿದ್ದಾರೆ.

ಪೋಲಿಸರ  ಸೂಕ್ತ ಬಂದೋಬಸ್ತ್ ಕೊರೆತೆ, ಅಂತಿಮ ದರ್ಶನಕ್ಕೆ ನೂಕು ನುಗ್ಗಲು ಉಂಟಾದ ಹಿನ್ನೆಲೆ ಪೋಲಿಸರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡರು. ಸರಿಯಾಗಿ ಪ್ಲಾನ್ ಮಾಡದೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಿರುವುದನ್ನ ಖಂಡಿಸಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಪೋಲಿಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Key words: Dhruvanarayan- final darshan- lot of people-police