ವೈವಾಹಿಕ ಜೀವನ ಗುಡ್ ಬೈ ಹೇಳಲು ನಿರ್ಧರಿಸಿದ ಧವನ್-ಆಯೆಷಾ

ಬೆಂಗಳೂರು, ಸೆಪ್ಟೆಂಬರ್ 8, 2021 (www.justkannada.in): ಕ್ರಿಕೆಟಿಗ ಶಿಖರ್ ಧವನ್-ಆಯೆಷಾ ವೈವಾಹಿಕ ಜೀವನ ಮುರಿದುಬಿದ್ದಿದೆ. ಈ ವಿಷಯವನ್ನು ಸ್ವತಃ ಆಯೆಷಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಮೆಲ್ಬೋರ್ನ್ ಮೂಲದ ಬಾಕ್ಸರ್ ಆಗಿರುವ ಆಯೆಷಾರನ್ನು 2012 ರಲ್ಲಿ ಧವನ್ ವಿವಾಹವಾಗಿದ್ದರು. ಇವರಿಗೆ  ಓರ್ವ ಪುತ್ರನಿದ್ದಾನೆ.

ಈ ನಡುವೆ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿರುವುದಕ್ಕೆ ಕಾರಣ ಗೊತ್ತಾಗಿಲ್ಲ.

ನಾನು ಮತ್ತೊಂದು ಬಾರಿ ವಿಚ್ಛೇದನಕ್ಕೆ ಮುಂದಾಗಿರುವುದಾಗಿ ಆಯೆಷಾ ಹೇಳಿಕೊಂಡಿದ್ದಾರೆ. ಆಯೇಷಾರದ್ದು ಎರಡನೇ ವಿವಾಹವಾಗಿತ್ತು. ಆದರೆ ಧವನ್ ವಿಚ್ಛೇದನದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ.

key words: Dhawan-Ayesha decided to say goodbye to married life