ಧರ್ಮಸ್ಥಳ ಕೇಸ್: SIT ಅಧಿಕಾರಿಗಳಿಂದ ದೂರುದಾರ ಮಾಸ್ಕ್​ ಮ್ಯಾನ್  ಬಂಧನ

ಬೆಂಗಳೂರು, ಆಗಸ್ಟ್​ 23,2025 (www.justkannada.in):  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ  ದೂರು ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಸ್​ಐಟಿ ಅಧಿಕಾರಿಗಳು  ಮಾಸ್ಕ್​ಮ್ಯಾನ್​ ಅನ್ನು ಬಂಧಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ದೂರುದಾರ ಸಿಎನ್ ಚಿನ್ನಯ್ಯನನ್ನು ಬಂಧಿಸಲಾಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್​ಗೆ ಎಸ್​ಐಟಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ದೂರುದಾರ ತೋರಿಸಿದ್ದ ಜಾಗಗಳಲ್ಲಿ ಎಸ್ ಐಟಿ ಅಗೆದಿದ್ದು ಈ ವೇಳೆ ಅಸ್ಥಿಪಂಜರ, ಮೂಳೆಗಳು ಸಿಕ್ಕಿದೆ.

ನಂತರ ಆತನನ್ನ ವಶಕ್ಕೆ ಪಡೆದು ಎಸ್ ಐಟಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ದೂರುದಾರ ಮಾಸ್ಕ್ ಮ್ಯಾನ್  ಸ್ಪೋಟಕ ಮಾಹಿತಿ ಹೊರ ಹಾಕಿದ್ದಾನೆ. ನಾನು  ಕೇವಲ ಪಾತ್ರದಾರಿ, ಸೂತ್ರದಾರಿ ಅಲ್ಲ. ಸೂತ್ರದಾರಿಗಳು ಬೇರೆ ಇದ್ದಾರೆ. ಅವರು ಹೇಳಿದಂತೆ ನಾನು ಹೇಳಿದೆ. ಬುರುಡೆ ತಂದು ಕೋರ್ಟ್ ಗೆ ಒಪ್ಪಿಸು ಎಂದಿದ್ದಕ್ಕೆ ನಾನು ಒಪ್ಪಿಸಿದೆ ಎಂದು ಎಸ್ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

Key words: Dharmasthala case,  Mask man, arrested, SIT officers