ಧರ್ಮಸ್ಥಳ ಕೇಸ್ NIA ತನಿಖೆಗೆ ವಹಿಸಿ: ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾಗಿ ಮನವಿ ಸಲ್ಲಿಸಿದ ಸ್ವಾಮೀಜಿಗಳ ನಿಯೋಗ

ನವದೆಹಲಿ,ಸೆಪ್ಟಂಬರ್,4,2025 (www.justkannada.in):  ಧರ್ಮಸ್ಥಳ ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸ್ವಾಮೀಜಿಗಳ ನಿಯೋಗ ಮನವಿ ಮಾಡಿದೆ.

ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಗೆ ಭೇಟಿ ನೀಡಿದ ವಚನಾನಂದ ಸ್ವಾಮೀಜಿಗಳ ನಿಯೋಗ ಧರ್ಮಸ್ಥಳ ಪ್ರಕರಣ ಕುರಿತು ಚರ್ಚೆ ನಡೆಸಿದರು. ಸ್ವಾಮೀಜಿಗಳಿಂದ ಅಮಿತ್ ಶಾ ಅವರು ಬುರುಡೆ ಪ್ರಕರಣ ಕುರಿತು ಮಾಹಿತಿ ಪಡೆದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ  ಎಂದು ತಿಳಿಸಿದರು.

ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಬಗ್ಗೆ ಆಕ್ಷೇಪವಿಲ್ಲ. ಆದರೆ ಧರ್ಮಸ್ಥಳದ ವಿರುದ್ದ ಆಗುತ್ತಿರುವ ಷಡ್ಯಂತ್ರ ಹೊರಗೆ ಬರಬೇಕು ಎಂಬುದು ಆಗ್ರಹ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ. ನಿಯೋಗದಲ್ಲಿ  ರಾಜಶೇಖರಾನಂ ಶ್ರೀ ಸಿದ್ದರಾಮೇಶ್ವರ ಶ್ರೀಗಳು ಇದ್ದರು.

Key words: Dharmasthala case, NIA, investigation, Swamiji, Amit Shah