ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡಿದ್ದವರ ವಿರುದ್ದ ಯಾಕೆ FIR ಇಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದಾಗಿ ಆರೋಪ ಪ್ರಕರಣ ಸಂಬಂಧ ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡಿದ್ದವರ ವಿರುದ್ದ ಇನ್ನು ಯಾಕೆ ಎಫ್ ಐಆರ್ ದಾಖಲು ಮಾಡಿಲ್ಲ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಮಯ ಬರಲಿ ಎಂದು  ಡಿಕೆ ಶಿವಕುಮಾರ್ ಹೇಳಿದರು. ಹಾಗಾದರೆ  ಡಿಕೆ ಶಿವಕುಮಾರ್ ಗೆ ಯಾವಾಗ ಸಮಯ ಬರುತ್ತೆ ಧರ್ಮಸ್ಥಳ ಗೊಂದಲ ಯಾವಾಗ ಬಗೆಹರಿಸುತ್ತಾರೆ.  ಅಪಪ್ರಚಾರ ಮಾಡಿದವರ ವಿರುದ್ದ ಯಾಕೆ ಎಫ್ ಐಆರ್ ಇಲ್ಲ? ಅಪಪ್ರಚಾರಕ್ಕೆ ಕಡಿವಾಣ ಹಾಕುವ ಇಚ್ಚೆ ಇಲ್ವಾ.? ಎಂದು ಕಿಡಿಕಾರಿದರು.

ಶಾಸಕ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಧರ್ಮಸ್ಥಳದ ವಿರುದ್ದ ಷಡ್ಯಂತ್ರದ ಬಗ್ಗೆ ಸರ್ಕಾರ ಉತ್ತರಿಸಬೇಕು.   ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕನ ವಿರುದ್ದವೂ ತನಿಖೆಯಾಗಲಿ ಎಂದು ಆಗ್ರಹಿಸಿದರು.

Key words: Dharmasthala case, BJP, State president, BY Vijayendra