ಅನಧಿಕೃತ ದಾಸ್ತಾನು ಕೇಂದ್ರದ ಮೇಲೆ ಕೃಷಿ ವಿಚಕ್ಷಣಾ ದಳ ದಾಳಿ: ಹತ್ತಿ, ಜೋಳ, ಸಜ್ಜೆ ವಶಕ್ಕೆ.

ಧಾರವಾಡ,ಜೂನ್,11,2021(www.justkannada.in): ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷಿ ವಿಚಕ್ಷಣಾ ದಳ ದಾಳಿ ನಡೆಸಿ ಅನಧಿಕೃತ ದಾಸ್ತಾನು ಮಾಡಲಾಗಿದ್ದ ಹತ್ತಿ, ಜೋಳ, ಸಜ್ಜೆ ವಶಕ್ಕೆ ಪಡೆಯಲಾಗಿದೆ.jk

ಹುಬ್ಬಳ್ಳಿ ಗೋಕುಲ್ ಇಂಡಿಸ್ಟ್ರಿಯಲ್ ಏರಿಯಾದಲ್ಲಿ ಧಾರವಾಡ ಕೃಷಿ ಜಾಗೃತ ದಳದ ಎಡಿಎಗಳಾದ ವಿಠಲ್ ರಾವ್ ಮತ್ತು ಬೊಮ್ಮಿಗಟ್ಟಿ ನೇತೃತ್ವದಲ್ಲಿ ಅನಧಿಕೃತ ದಾಸ್ತಾನು ಕೇಂದ್ರದ ಮೇಲೆ‌ ದಾಳಿ ನಡೆಸಿ  ಸುಮಾರು 63 ಲಕ್ಷ ಮೌಲ್ಯದ  7512 ಪ್ಯಾಕೇಟ್ ಹತ್ತಿ, 5.58 ಕ್ವಿಂಟಾಲ್ ಹೈಬ್ರೀಡ್ ಜೋಳ, 16.92ಕ್ವಿಂಟಾಲ್ ಸಜ್ಜೆ  ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆಯಲ್ಲಿಯೂ ಕೃಷಿ ವಿಚಕ್ಷಣಾ ದಳದ ದಾಳಿ ನಡೆಸಿದ್ದು , ಜಮಖಂಡಿಯಲ್ಲಿ ದಾಳಿ ನಡೆಸಿ 1.18ಲಕ್ಷ‌ ಮೌಲ್ಯದ ಅನಧಿಕೃತ 41.57 ಲೀಟರ್ ಕೀಟನಾಶಕ ವಶಕ್ಕೆ ಪಡೆದಿದ್ದಾರೆ.

Key words: dharawad- Agricultural Intelligence Agency- attack – Cotton-sorghum- seized.