ನಾವು ಶ್ರೀರಾಮಚಂದ್ರನ ಭಕ್ತರೇ: ಅಯೋಧ್ಯೆಗೆ ನಾನೂ ಹೋಗಿ ಬರುತ್ತೇನೆ- ಸಿಎಂ ಸಿದ್ದರಾಮಯ್ಯ.

ಶಿವಮೊಗ್ಗ,ಜನವರಿ,12,2024(www.justkannada.in):  ನಾವು ಶ್ರೀರಾಮಚಂದ್ರನ ಭಕ್ತರೇ. ಜನವರಿ 22ರ ನಂತರ ನಾನು ಅಯೋಧ್ಯೆಗೆ ಹೋಗಿ ನೋಡಿ ಬರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

5ನೇ ಗ್ಯಾರಂಟಿ  ಯುವನಿಧಿ ಚಾಲನೆ ನೀಡಲು ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಏರ್ ಪೋರ್ಟ್ ಬಳಿ ಮಾತನಾಡಿ, ಶ್ರೀರಾಮಚಂದ್ರನನ್ನು ನಾವು ವಿರೋಧ ಮಾಡಲ್ಲ.  ನಾವು ಶ್ರೀರಾಮಚಂದ್ರನ  ಭಕ್ತರು. ಶ್ರೀರಾಮನ ಪೂಜೆ ಮಾಡುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ. ಜನವರಿ 22ಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನಾವು ಪೂಜೆ ಮಾಡುತ್ತೇವೆ ರಾಜ್ಯದ ಎಲ್ಲಾ  ರಾಮಮಂದಿರಗಳಲ್ಲಿ ಕಾರ್ಯಕರ್ತರು ಪೂಜೆ ಮಾಡಲಿದ್ದಾರೆ ಎಂದರು.

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಮಮಂದಿ ಯಾವ ರೀತಿ ನಿರ್ಮಾಣ ಮಾಡಿದ್ದಾರೆ ಅಂತಾ ನೋಡುತ್ತೇನೆ.  ಅಯೋಧ್ಯೆಗೆ ನಾನೂ ಹೋಗುತ್ತೇನೆ.  ಜನವರಿ 22ರ ನಂತರ ಅಯೋಧ್ಯೆಗೆ ಹೋಗಿ ಬರುತ್ತೇನೆ  ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

Key words: devotees – Sri Ramachandra-I will- go –to- Ayodhya- CM Siddaramaiah.