ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದ ಲಕ್ಷಾಂತರ ಭಕ್ತರು; ಇಂದು ಅಂತ್ಯಕ್ರಿಯೆಗೆ ಸಿದ್ಧತೆ.

ವಿಜಯಪುರ,ಜನವರಿ,3,2023(www.justkannada.in):  ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪಾರ್ಥೀವ ಶರೀರ ಅಂತಿಮ ದರ್ಶನಕ್ಕಾಗಿ ಸೈನಿಕ ಶಾಲೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಲಕ್ಷಾಂತರ ಜನರು ಆಗಮಿಸಿ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.

ಶ್ರೀಗಳ ಅಂತ್ಯಕ್ರಿಯೆ ಇಂದು ಸರ್ಕಾರಿ ಗೌರವದೊಂದಿಗೆ ಅವರೇ ಬರೆದ ವಿಲ್ ಪ್ರಕಾರ ಇಂದು ಸಂಜೆ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ.  ಶ್ರಿಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ .  ಅಂತ್ಯ ಸಂಸ್ಕಾರಕ್ಕೆ  ಶ್ರೀಗಂಧದ ಕಟ್ಟಿಗೆ ಬಳಕೆ ಮಾಡಲಾಗುತ್ತಿದ್ದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶ್ರೀರಾಮುಲು, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್   ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು , ಶ್ರೀಗಳನ್ನ ಕಳೆದುಕೊಂಡಿದ್ದು ತೀವ್ರ ನೋವುಂಟು ಮಾಡಿದೆ.   ಅತ್ಯಂತ ಶ್ರೇಷ್ಠ ಸಂತರಲ್ಲಿ ಶ್ರೀಗಳು ಒಬ್ಬರು ಎಂದರು.

ನಂತರ ಪ್ರಮೋದ್ ಮುತಾಲಿಕ್ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ರಾಷ್ಟ್ರೀಯ ಸಂತರು. ರಾಷ್ಟ್ರೀಯ ವಿಚಾರಧಾರೆಯನ್ನ ಸಮಾಜಕ್ಕೆ ಕೊಟ್ಟ ಯೋಗಿ. ನೂರಾರು ಸ್ವಾಮಿ ವಿವೇಕಾನಂದರನ್ನ ಹುಟ್ಟು ಹಾಕಿದರು. ಸರ್ಕಾರದ ವಿವಿಗಳಲ್ಲಿ ಸಿದ್ಧೇಶ್ವರ  ಅಧ್ಯಯನ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

Key words: devotees – final darshan – Siddeshwar Shri-vijaypur