Monday, August 10, 2026

BDA Apartments

Home Front Page ಬನ್ನಿ ಎಲ್ಲರೂ ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ- ಧ್ವಜಾರೋಹಣ ಬಳಿಕ ಸಿಎಂ ಬಿಎಸ್ ವೈ ಭಾಷಣ…

ಬನ್ನಿ ಎಲ್ಲರೂ ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ- ಧ್ವಜಾರೋಹಣ ಬಳಿಕ ಸಿಎಂ ಬಿಎಸ್ ವೈ ಭಾಷಣ…

ಬೆಂಗಳೂರು,ಆ,15,2019(www.justkannada.in)  ರಾಜ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಬನ್ನಿ ಎಲ್ಲರೂ ಒಗ್ಗಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಜನತೆಗೆ ಕರೆ ನೀಡಿದರು.

ಇಂದು ದೇಶದ  73ನೇ ಸ್ವಾತಂತ್ರೋತ್ಸವ ಸಂಭ್ರಮವಾಗಿದ್ದು ಬೆಂಗಳೂರಿನ  ಮಾಣಿಕ್‌ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಜನರ ಸೇವೆಗೆ ನನಗೆ ಮತ್ತೆ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಕನ್ನಡಿಗರು ಸ್ವಾಭಿಮಾನದಿಂದ ನೆಮ್ಮದಿಯಿಂದ ಬದುಕಬೇಕು. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.  ಐಟಿ ಬಿಟಿ ವಿಸ್ತರಣೆ. ರಾಜ್ಯದ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಯತ್ನಿಸುತ್ತೇವೆ. ಸರ್ಕಾರಿ ಶಾಲೆಗಳು ನಮ್ಮ ಶಾಲೆ ಎಂದು ಭಾವಿಸಬೇಕು. ಇದಕ್ಕಾಗಿ ಸರ್ಕಾರ ಆದ್ಯತೆ ನೀಡಲಿದೆ. ಅನ್ನದಾತನ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ಅನ್ನದಾತರ ಹಿತ ರಕ್ಷಣೆ, ಜನ ಹಿತಕ್ಕಾಗಿ ಸರ್ಕಾರ, ಕೈಗಾರಿಕೆಗೆ ಉತ್ತೇಜನ ಕೌಶಲಾಭಿವೃದ್ಧಿ ಮತ್ತು ಉದ್ಯೋಗಸೃಷ್ಟಿ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ದುರ್ಬಲ ವರ್ಗದ ಕಲ್ಯಾಣವೇ ಈ ಸರ್ಕಾರದ ಗುರಿಯಾಗಿದೆ. ಕನ್ನಡಕ್ಕೆ ಆದ್ಯತೆ ನೀಡುತ್ತೇವೆ ಎಂದು  ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಹಾಗೆಯೇ ಜನರು ಸಮಸ್ಯೆ ಹೊತ್ತು ಬೆಂಗಳೂರಿಗೆ ಬರಬಾರದು. ಜನರ ಸಮಸ್ಯೆ ಅಯಾ ಜಿಲ್ಲೆಯಲ್ಲೇ ಬಗೆಹರಿಯಬೇಕು.  ರಾಜ್ಯದ ಜನರು ನೆಮ್ಮದಿಯಿಂದ ಬದುಕಬೇಕು. ಇದಕ್ಕಾಗಿ ಸೂಚನೆ ನೀಡಿದ್ದೇನೆ.  ದುರ್ಬಲ ವರ್ಗಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದರು.

ರಾಜ್ಯ ಅತಿವೃಷ್ಟಿ ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿ ತತ್ತರಿಸುತ್ತಿದೆ. 40 ವರ್ಷಗಳಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದೆ. ಈ ಎರಡು ಪರಿಸ್ಥಿತಿ ಎದುರಿಸಲು ನನ್ನ ಸರ್ಕಾರ ಸನ್ನದವಾಗಿದೆ. 103 ತಾಲೂಕು ಭೀಕರ ಪ್ರವಾಹಕ್ಕೆ ತುತ್ತಾಗಿದೆ.61 ಮಂದಿ ಸಾವನ್ನಪ್ಪಿದ್ದಾರೆ. 859 ಜಾನುವಾರು ಸಾವನ್ನಪ್ಪಿದೆ. 4.64 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಪ್ರವಾಹ ಹಾಗೂ ಭೂ ಕುಸಿತ ಮತ್ತು 58620 ಮನೆಗಳಿಗೆ ಹಾನಿಯಾಗಿದೆ. ಕೇಂದ್ರದ ಅನುದಾನ ತರುವುದು ಸೇರಿದಂತೆ ಜನರ ಸಂಕಷ್ಟಗಳಿಗೆ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲು ಸರ್ಕಾರ ಯಾವ ಪ್ರಯತ್ನವನ್ನು ಕೈಬಿಟ್ಟಿಲ್ಲ ಎಂದು ಬಿಎಸ್‌ ವೈ ಹೇಳಿದರು.

Key words: development – state-independence day-CM BS yeddyurappa- speech -r flagging.