ಅನಂತಕುಮಾರ್ ಪ್ರತಿಷ್ಠಾನದಿಂದ ‘ದೇಶ ಮೊದಲು’ ಸಂವಾದ ಕಾರ್ಯಕ್ರಮ

ಬೆಂಗಳೂರು, ಆಗಸ್ಟ್ 28, 2022 (www.justkannada.in): ಅನಂತಕುಮಾರ್ ಪ್ರತಿಷ್ಠಾನವು ನಡೆಸುತ್ತಿರುವ ‘ದೇಶ ಮೊದಲು’ ಸಂವಾದ ಕಾರ್ಯಕ್ರಮದ ಹತ್ತನೆಯ ಆವೃತ್ತಿಯು ಅಂತರ್ಜಾಲದ ಮೂಲಕ ಯಶಸ್ವಿಯಾಗಿ ನಡೆಯಿತು.

ಇನ್ನು ಹತ್ತು ವರ್ಷಗಳಲ್ಲಿ ‘ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ಪೂರಕವಾಗಿ ಹೊಸ ಹೊಸ ಆಷ್ಕಾರಗಳು ನಡೆಯಬೇಕೆಂದು ಪ್ರ‘ಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಅನುಗುಣವಾಗಿ ಚಿಂತನಾ ನಾಯಕತ್ವ (Thought Leadership) ವನ್ನು ರೂಪಿಸಲು ಪ್ರತಿಷ್ಠಾನವು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಡಾ. ತೇಜಸ್ವಿನಿ ಅನಂತಕುಮಾರ್ ತಮ್ಮ ಪ್ರಾಸ್ತಾಕ ‘ಭಾಷಣದಲ್ಲಿ ತಿಳಿಸಿದರು.

ಆಷ್ಕಾರದಲ್ಲಿ ಸಹಯೋಗ – ಎಲ್ಲರಿಗೂ ಗೆಲುನ ಅವಕಾಶ – ಶೂನ್ಯ ಗಳಿಕೆಯ ಪಂದ್ಯವಲ್ಲ (Colaborative Innovation – Win win for all – Not a zero sum game) ಎಂಬ ಷಯದ ಮೇಲೆ ಅಗ್ರಿಕೊಲಾಬರೇಟರಿ ಸಂಸ್ಥೆಯ ಸ್ಥಾಪಕ ಶ್ರೀ ನಿಪುಣ್ ಮೆಹ್ರೋತ್ರಾ, ರಿಯ ಪತ್ರಕರ್ತ ಮತ್ತು ಅಂಕಣಕಾರ ಶ್ರೀ ರಾಘವನ್ ಶ್ರೀನಿವಾಸನ್ ಮತ್ತು ಎಐಸಿಟಿಇ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಬುದ್ಧ ಚಂದ್ರಶೇಖರ್ ಮಾತನಾಡಿದರು.

ದೇಶದ ಶೇ ೮೦ ರಷ್ಟು ನೀರನ್ನು ಬಳಸಿಕೊಳ್ಳುವ ಶೇ ೫೦ ರಷ್ಟು ಶ್ರುಕರನ್ನು ತೊಡಗಿಸಿಕೊಳ್ಳುವ ಕೃ ಕ್ಷೇತ್ರದಲ್ಲಿ ರ್ವಾಕವಾಗಿ ಸುಮಾರು ೯೨೦೦೦ ಕೋಟಿ ರೂಪಾುಗಳ ಆಹಾರ ಸಾಮಗ್ರಿ ವ್ಯರ್ಥವಾಗುತ್ತಿದೆ. ಈ ಕ್ಷೇತ್ರದಲ್ಲಿ ಹಣಕಾಸು ಮತ್ತು ಕೌಶಲ್ಯಗಳು ಮುಕ್ತವಾಗಿ ದೊರೆಯುತ್ತಿಲ್ಲ. ಡಿಜಿಟಲ್ ತಂತ್ರಜ್ಞಾನ ಇನ್ನೂ ಈ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಕೊಂಡಿಲ್ಲ. ಕೃಯು ಲಾ‘ದ ಮೇಲೆ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಸಹಯೋಗದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ತಡೆರಹಿತ ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ೨೭೦ ರಿಂದ ೩೦೦ ಬಿಲಿಯನ್ ಡಾಲರುಗಳ ಕ್ಷೇತ್ರದಲ್ಲಿ ರ್ವಾಕವಾಗಿ ೫೦ ರಿಂದ ೭೦ ಬಿಲಿಯ ಡಾಲರುಗಳ ಹೆಚ್ಚಳವನ್ನು ಸಾಧಿಸಬಹುದಾಗಿದೆ. ಎಂದು ಶ್ರೀ ನಿಪುಣ್ ಮೆಹ್ರೋತ್ರಾ ತಿಳಿಸಿದರು.

ಶ್ರೀ ರಾಘವನ್ ಶ್ರೀನಿವಾಸನ್ ಮಾತನಾಡಿ, ಕೃಷಿ ಕ್ಷೇತ್ರದ ಸಮಸ್ಯೆಗಳು ಕಳೆದ ೨೫ ವರ್ಷಗಳಿಂದ ಹಾಗೆಯೇ ಉಳಿದುಕೊಂಡು ಬಂದಿವೆ. ಈ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಯ ಪ್ರಮಾಣ ತುಂಬ ಕಡಿಮೆ ಇದೆ. ಡಿಜಿಟಲ್ ಕ್ಷೇತ್ರದಲ್ಲಿ ಸರಕಾರ ಮತ್ತು ಖಾಸಗಿ ಸಹ‘ಭಾಗಿತ್ವದಲ್ಲಿ ಅಪಾರ ಸಾಧನೆ ಮಾಡಲಾಗಿದೆ. ಯುಪಿಐ, ಆರೋಗ್ಯ ಸೇತು ಮುಂತಾದ ಆಷ್ಕಾರಗಳು ಹಾಗೂ ಕೋಡ್ ಸಮಯದಲ್ಲಿ ನಡೆದ ಆಷ್ಕಾರಗಳು ಇದಕ್ಕೆ ಉತ್ತಮ ಉದಾಹರಣೆ ಎಂದರು.

ಶ್ರೀ ಬುದ್ಧ ಚಂದ್ರಶೇಖರ್  ಮಾತನಾಡಿ, ಭಾರತದ ಇತಿಹಾಸದಲ್ಲಿ ಸಾರಾರು ವರ್ಷಗಳಿಂದಲೇ ನೂತನ ಆಷ್ಕಾರಗಳು ನಡೆದಿರುವುದನ್ನು ಕಾಣಬಹುದು. ಸೊನ್ನೆ, ದಶಮಾನ ಪದ್ಧತಿ, ಪೈ ಸ್ಥಿರಾಂಕ, ಆಯುರ್ವೇದ,  ಸುಲಭ್ ಶೌಚಾಲಯ, ಸತುವನ್ನು ಕರಗಿಸುವ ಸಾಧನ ಮುಂತಾದ ಸಾರಾರು ಆಷ್ಕಾರಗಳನ್ನು ನಮ್ಮ ದೇಶದಲ್ಲಿ ಮಾಡಲಾಗಿದೆ. ಸಹಯೋಗದ ಮೂಲಕ ಆಷ್ಕಾರದ ಗುಣ ‘ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ ಎಂದು ಹೇಳಿದರು. ವಿಜೇತಾ ಅನಂತಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.