ಸಿಎಂ ಹೆಚ್.ಡಿಕೆ ರಾಜೀನಾಮೆಗೆ ಉಭಯ ಸದನದಲ್ಲೂ ಒತ್ತಾಯ- ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ…

0
274

ಬೆಂಗಳೂರು,ಜು,15,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ  ರಾಜೀನಾಮೆಗೆ ಉಭಯ ಸದನದಲ್ಲೂ ಒತ್ತಾಯ ಮಾಡುತ್ತೇವೆ ಎಂದು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ  ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಸಭೆಯಲ್ಲಿ ಬಿಜೆಪಿ ನಿರ್ಧಾರ ಏನಾಗುತ್ತದೆಯೂ ಅದೇ ನಿಲುವು ಪರಿಷತ್ ನಲ್ಲೂ ಇರುತ್ತದೆ.  ಸಿಎಂ ರಾಜೀನಾಮೆಗೆ ಉಭಯ ಸದನದಲ್ಲೂ ಒತ್ತಾಯ ಮಾಡುತ್ತೇವೆ. ಸರ್ಕಾರಕ್ಕೆ ಒತ್ತಡ ಹಾಕುವುದು ನಮ್ಮ ಜವಾಬ್ದಾರಿ ಎಂದರು.

ಹಾಗೆಯೇ ಸಮ್ಮಿಶ್ರ ಸರ್ಕಾರಕ್ಕೆ ಘನತೆ ಗೌರವ ಇಲ್ಲದಿದ್ದರೂ  ವಿಶ್ವಾಸಮತವಿಲ್ಲದಿದ್ದರೂ  ಸರ್ಕಾರ ಮಾಡುವ ಭ್ರಮೆಯಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಇದನ್ನ ಬಿಜೆಪಿ ವಿರೋಧಿಸುತ್ತದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.

Key words: demands- CM HDK- resignation-bjp-Kota Srinivasa Poojary