ಸಿದ‍್ಧರಾಮಯ್ಯ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವಂತೆ ಒತ್ತಾಯ.

ಮೈಸೂರು,ಮೇ,16,2023(www.justkannada.in): ಬಡವರು ದೀನದಲಿತರ ಉದ್ಧಾರಕ್ಕಾಗಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಭರವಸೆ ಈಡೇರಿಸುವ ಸಲುವಾಗಿ ಸಿದ್ದರಾಮಯ್ಯ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ ಒತ್ತಾಯಿಸಿದ್ದಾರೆ.

ನೂತನವಾಗಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಹೆಚ್.ಸಿ  ಮಹದೇವಪ್ಪ ಅವರನ್ನ ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ ಮತ್ತು ಮುಖಂಡರು ಭೇಟಿಯಾಗಿ  ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ  ವರುಣಾ ಮಹೇಶ್, ಮಾಜಿ ಸಿಎಂ  ಸಿದ್ದರಾಮಯ್ಯ ಅವರು ಅವರ ಅಧಿಕಾರಾವಧಿಯಲ್ಲಿ ಭಾಗ್ಯಗಳ ಯೋಜನೆಗಳನ್ನು ತಂದಿದ್ದಾರೆ.  ಅದನ್ನು ಜನರಿಗೆ ತಲುಪುವಂತೆ ಮಾಡಿದ್ದು  ಸಿದ್ದರಾಮಯ್ಯ ಅವರು.  ಅಂತಹ ವ್ಯಕ್ತಿ ಮತ್ತೊಮ್ಮೆ ಸಿಎಂ ಆಗಬೇಕು.  ಕಾಂಗ್ರೆಸ್ ಹೈಕಮಾಂಡ್ ನ  ಎಲ್ಲಾ ಮುಖಂಡರು ಈಗಾಗಲೇ ಹೇಳಿರುವಂತೆ , ಗ್ಯಾರಂಟಿಯನ್ನು ನೀಡಿರುವುದು ಸರಿ ಅಷ್ಟೇ.  ಅವುಗಳನ್ನ ಜಾರಿಗೆ ತರಬೇಕಾದರೆ ಬೊಕ್ಕಸದ ಹಣವನ್ನು ತುಂಬಬೇಕು. ಜನರಿಗೆ ಕೊಟ್ಟ ಭರವಸೆಯಂತೆ ನಡೆಯಬೇಕು. ಹೀಗಾಗಿ ಮತ್ತೊಮ್ಮೆ ಸಿದ್ಧರಾಮಯ್ಯ ಅವರನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು.  ಈ ಮೂಲಕ ದೀನ ದಲಿತರ, ಬಡವರ, ಉದ್ಧಾರ ಮತ್ತು ಪಕ್ಷದ ಪ್ರಣಾಳಿಕೆಯ ಜಾರಿ ತರಲು ಸಹಕರಿಸಬೇಕು ಎಂದು  ಆಗ್ರಹಿಸಿದರು.

Key words: Demand – Siddaramaiah -Chief Minister –again-mysore-varuna mahesh