ಕರವೇ ಕಾರ್ಯಕರ್ತರ ಬಿಡುಗಡೆಗೆ ಆಗ್ರಹ:  ಖಂಡನಾ ಸಭೆಯಲ್ಲಿ 2 ಪ್ರಮುಖ ನಿರ್ಣಯ ಕೈಗೊಂಡ ಕನ್ನಡ ಹೋರಾಟಗಾರರು.

ಬೆಂಗಳೂರು, ಡಿಸೆಂಬರ್​ 29,2023(www.justkannada.in): ಕಡ್ಡಾಯ ಕನ್ನಡ ನಾಮ ಫಲಕ  ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವೇಳೆ ಬಂಧಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಂದು ಕನ್ನಡಪರ ಹೋರಾಟಗಾರರು ಖಂಡನಾ ಸಭೆಯನ್ನ ನಡೆಸಿದರು.

ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಕರವೇ ಕಾರ್ಯಕರ್ತರನ್ನ ಬಿಡುಗಡೆ ಮಾಡದಿದ್ದರೇ ಬೆಂಗಳೂರು ಬಂದ್ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಬಂಧಿಸಲಾಗಿರುವ ಕರವೇ ಕಾರ್ಯಕರ್ತರನ್ನ ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಪ್ರಕರಣವನ್ನ ಹಿಂಪಡೆಯಬೇಕು ಎಂಬ ನಿರ್ಣಯವನ್ನು ಕೈಗೊಂಡಿದ್ದು ಒಂದು ವೇಳೆ ಬಿಡುಗಡೆ ಮಾಡದಿದ್ದರೇ ಬೆಂಗಳೂರು ನಗರ ಬಂದ್ ಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಫೆ.28ಕ್ಕೆ ಕನ್ನಡ ನಾಮಫಲಕ ಕಡ್ಡಾಯ ಆಗಬೇಕು. ಇಲ್ಲದಿದ್ದರೇ ಮತ್ತೆ ನಾಮಫಲಕಗಳ ವಿರುದ್ಧ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Key words: Demand – release –kannada organization-activists-2 resolutions