ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಡೆಡ್ ಲೈನ್ ಒಳಗೆ ಸ್ಪಂದಿಸದಿದ್ದರೇ ಹೋರಾಟ- ಬಾಲಕೃಷ್ಣ ಎಚ್ಚರಿಕೆ.

  ಬೆಂಗಳೂರು,ನವೆಂಬರ್,28,2022(www.justkannada.in): ಒಕ್ಕಲಿಗರ ಮೀಸಲಾತಿಯನ್ನ ಶೇ.4ರಿಂದ ಶೇ.12ಕ್ಕೆ ಹೆಚ್ಚಿಸಬೇಕು. ಡೆಡ್ ಲೈನ್ ಒಳಗೆ ಸ್ಪಂದಿಸದಿದ್ದರೇ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಈ ಕುರಿತು ಇಂದು ಮಾತನಾಡಿದ ಬಾಲಕೃಷ್ಣ, ಜನವರಿ 23 ರಂದು ಒಕ್ಕಲಿಗ ಮಹಾ ಸಮಾವೇಶ ನಡೆಯಲಿದೆ.  15ರಿಂದ 20 ಲಕ್ಷ ಜನರನ್ನ ಸೇರಿಸುತ್ತೇವೆ.  ಪಕ್ಷಾತೀತಾಗಿ ನಾಯಕರನ್ನ ಆಹ್ವಾನಿಸುತ್ತೇವೆ. ಜ 23ರ ಒಳಗೆ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಯುತ್ತದೆ ಎಂದರು.

Key words: Demand – increase – reservation-vokkaliga- Balakrishna -warns.