Monday, September 14, 2026

BDA Apartments

ಅದಾನಿ ವಿರುದ್ದ ತನಿಖೆ ನಡೆಸಲು ಕೇಂದ್ರಕ್ಕೆ ಧೈರ್ಯವಿಲ್ಲ: ಪ್ರಧಾನಿ ಮೋದಿ ವಿ...
Home Front Page ಅದಾನಿ ವಿರುದ್ದ ತನಿಖೆ ನಡೆಸಲು ಕೇಂದ್ರಕ್ಕೆ ಧೈರ್ಯವಿಲ್ಲ: ಪ್ರಧಾನಿ ಮೋದಿ ವಿರುದ್ದ ಅರವಿಂದ ಕೇಜ್ರಿವಾಲ್ ಗುಡುಗು.

ಅದಾನಿ ವಿರುದ್ದ ತನಿಖೆ ನಡೆಸಲು ಕೇಂದ್ರಕ್ಕೆ ಧೈರ್ಯವಿಲ್ಲ: ಪ್ರಧಾನಿ ಮೋದಿ ವಿರುದ್ದ ಅರವಿಂದ ಕೇಜ್ರಿವಾಲ್ ಗುಡುಗು.

ನವದೆಹಲಿ,ಮಾರ್ಚ್,23,2023(www.justkannada.in): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅದಾನಿ ವಿರುದ್ದ ತನಿಖೆ ನಡೆಸಲು ಧೈರ್ಯವಿಲ್ಲ. ಅದಾನಿ ಮನೆ ಮೇಲೆ ಸಿಬಿಐ,ಇಡಿ ದಾಳಿ ಮಾಡಿಲ್ಲ ಮೋದಿಯನ್ನ ಜನ ಕಳ್ಳರ ಸರ್ದಾರ್ ಎಂದು ಕರೆಯುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅರವಿಂದ ಕೇಜ್ರಿವಾಲ್, ಬಿಜೆಪಿ ಸೇರ್ಪಡೆಯಾದರೇ ಎಲ್ಲಾ ಕೇಸ್ ಗಳು ಖುಲಾಸೆಯಾಗುತ್ತವೆ. ಮೋದಿ ಪ್ರತಿದಿನ ಯಾರನ್ನಾದರೂ ಕಾರಗೃಹಕ್ಕೆ ಕಳಿಸುತ್ತಿದ್ದಾರೆ. ಬೇರೆ ಪಕ್ಷದಲ್ಲಿದ್ದುಕೊಂಡು ನೀವು ಭ್ರಷ್ಟಾಚಾರ ಮಾಡಬೇಡಿ ಬಿಜೆಪಿಗೆ ಬಂದು ಭ್ರಷ್ಟಾಚಾರ ಮಾಡಿ ಎಂದು ಮೋದಿ ಹೇಳುತ್ತಿದ್ದಾರೆ. ಗುಜರಾತ್ ನಲ್ಲಿ ನಕಲಿ ಮದ್ಯ ಸೇವಿಸಿ ಹಲವು ಜನರು ಮೃತಪಟ್ಟಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. 10 ರಿಂದ 15 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಮನೀಶ್ ಸಿಸೋಡಿಯ ಸತ್ಯೇಂದ್ರ ಜೈನ್ ಭ್ರಷ್ಟಾಚಾರ ಮಾಡಿಲ್ಲ. ಮೋದಿಗೆ ನಿದ್ರೆ ಬರದಿದ್ರೆ ಮಾತ್ರೆ ತೆಗೆದುಕೊಳ್ಳಲಿ . ಪ್ರಧಾನಿ ಮೋದಿ ನಿತ್ಯವೂ ಸಿಟ್ಟಿನಲ್ಲೇ ಇರ್ತಾರೆ ಎಂದು ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

Key words: Delhi -CM -Arvind Kejriwal- against-PM Modi