ಮೈಸೂರು,ನವೆಂಬರ್,11,2025 (www.justkannada.in): ಬಿಹಾರ ಚುನಾವಣೆ ವೇಳೆಯಲ್ಲೇ ಬಾಂಬ್ ಬ್ಲಾಸ್ಟ್ ಆಗಿದೆ. ಈ ಕುರಿತು ಕೇಂದ್ರವೇ ತನಿಖೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ ? ನೆನ್ನೆಯ ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು.
ಪತ್ರಕರ್ತರ ಈ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಚುನಾವಣೆ ವೇಳೆಯ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು. ಕೇಂದ್ರವೇ ತನಿಖೆ ನಡೆಸಿ ಉತ್ತರಿಸಲಿ. ನೆನ್ನೆಯ ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದರು.
ಬಾಂಬ್ ಬ್ಲಾಸ್ಟ್ ಗಳು ಆಗಬಾರದು. ಅಮಾಯಕರ ಜೀವಹಾನಿ ಬೇಸರದ ಸಂಗತಿ. ಅಮಾಯಕ ಜನರು ಬಲಿಯಾಗಿದ್ದಾರೆ. ಒಂದು ಪತ್ರಿಕೆಯಲ್ಲಿ ಮೂರು ಜನ, ಒಂದರಲ್ಲಿ ಎಂಟು ಜನ ಬರೆದಿದ್ದಾರೆ. ಸಾವು ಸಾವುಗಳೇ, ಆ ಘಟನೆ ನಡೆಯಬಾರದು. ದೆಹಲಿಯ ಕೆಂಪುಕೋಟೆ ಬಳಿಯೇ ನಡೆದಿದೆ. ದಾಳಿ ಕುರಿತಂತೆ ನಾನು ಮಾಹಿತಿ ಕಲೆ ಹಾಕುತ್ತಿದ್ದೀವಿ. ಮೃತರ ಕುಟುಂಬದ ಜೊತೆ ನಾವು ಇರುತ್ತೇವೆ. ಚುನಾವಣೆ ವೇಳೆಯೇ ಘಟನೆ ನಡೆಯುವುದು ನನಗೆ ಗೊತ್ತಿಲ್ಲ. ಬಿಹಾರ ಚುನಾವಣೆ ವೇಳೆಯೇ ಇಂತಹ ಘಟನೆ. ಬಾಂಬ್ ದಾಳಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿಜೆಪಿ ವಿರುದ್ಧವಾಗಿ ಪರಿಣಾಮ ಬೀರಬಹುದು. ಕಾಂಗ್ರೆಸ್ ಪರವಾಗಿ ಅದು ವರ್ಕ್ ಆಗಬಹುದು ಎಂದರು.
ಭಾರತ ಹಿಂದೂರಾಷ್ಟ್ರ ಮಾಡಬೇಕು ಅಂತಾರೆ. ಇದು ಸಾಧ್ಯವೇ ಇಲ್ಲ. ನಮ್ಮದು ಬಹುತ್ವ ದೇಶ. ನಮ್ಮಲ್ಲಿ ಎಲ್ಲ ಜಾತಿ, ಜನಾಂಗ, ಭಾಷೆ,ಧರ್ಮ ಎಲ್ಲವೂ ಇದೆ. ಎಲ್ಲರನ್ನೂ ಒಳಗೊಳ್ಳುವ ದೇಶ ನಮ್ಮ ಭಾರತ. ನಮ್ಮದು ಭಾರತ ದೇಶ. ಭಾರತ ಸಂವಿಧಾನಬದ್ಧ ಬಹುತ್ವದ ದೇಶ ಎಂದರು.
Key words: Delhi, Bomb blast, during, elections, CM, Siddaramaiah







