ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ವಿಚಾರ: ಮಾಜಿ ಸಿಎಂ ಹೆಚ್.ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ..

ಬೆಂಗಳೂರು,ಆಗಸ್ಟ್,23,2023(www.justkannada.in):  ಕಾವೇರಿ, ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದುಕೊಂಡು ಹೋಗುವ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್,ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ದು ಏನು ಮಾಡುತ್ತಾರೆ..? ಹಿತರಕ್ಷಣೆಗೆ ತಾಂತ್ರಿಕ ಅಧಿಕಾರಿಗಳಿದ್ದಾರೆ. ನೀರಾವರಿ ಬಗ್ಗೆ ಜ್ಞಾನ ಹೊಂದಿರುವವರು ಇದ್ದಾರೆ. ಸರ್ವಪಕ್ಷ ಸಭೆಯಲ್ಲಿ ಏನು ಚರ್ಚೆ ಮಾಡುತ್ತಾರೆ ನೋಡೋಣ ಎಂದರು.

ಇನ್ನು ಇಂದು ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಚಂದ್ರಯಾನ-3 ಸಕ್ಸಸ್ ಆಗಲಿ.  ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ ಹಲವು ವರ್ಷಗಳ ಶ್ರಮಕ್ಕೆ ಯಶಸ್ಸು ಬರುವ ಸಮಯವಿದು. ಜನತೆ ಆಸಕ್ತಿಯಿಂದ ಕಾದು ಕುಳಿತಿದ್ದಾರೆ. ಶುಭವಾಗಲಿ ಎಂದು ಹೇಳಿದರು.

Key words: delegation – Centre-Former CM –HD Kumaraswamy- reacted