ರಾಜ್ಯಾದ್ಯಂತ ಇಂದಿನಿಂದ ಪದವಿ ಮತ್ತ ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭ…

ಬೆಂಗಳೂರು,ನವೆಂಬರ್,17,2020(www.justkannada.in): ರಾಜ್ಯದಲ್ಲಿ  ಕೋವಿಡ್ ಲಾಕ್ ಡೌನ್ ನಿಂದಾಗಿ ಕಳೆದ 8 ತಿಂಗಳಿನಿಂದ  ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ತೆರೆಯುತ್ತಿದ್ದು ವಿದ್ಯಾರ್ಥಿಗಳು ಸರ್ಕಾರದ ಮಾರ್ಗಸೂಚಿ ಅನುಸರಿಸಿ ತರಗತಿಗೆ ಹಾಜರಾಗಬೇಕಿದೆ.kannada-journalist-media-fourth-estate-under-loss

 ಇಂದಿನಿಂದ ಪದವಿ ಕಾಲೇಜು, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕಾಲೇಜುಗಳು ಆರಂಭವಾಗಿದ್ದು, ರಾಜ್ಯ ಸರಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವಿ.ವಿ.ಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿವೆ.degree-d-post-graduate-colleges-will-commence-today

 ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್‌ಲೈನ್‌ ಹಾಗೂ ಆಫ್ ಲೈನ್‌ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್‌ ಮಾಡಲಾಗಿದೆ.  ಕಾಲೇಜು ಪ್ರವೇಶಿಸಲು ಕೊರೊನಾ ನೆಗೇಟಿವ್ ರಿಪೋರ್ಟ್ ಕಡ್ಡಾಯವಾಗಿದೆ, ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಕಾಲೇಜಿಗೆ ಬರಬೇಕಿದೆ. ಅಲ್ಲದೆ ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ಸರ್ಕಾರ ಸೂಚಿಸಿದೆ.

English summary…

Degree and PG Degree colleges starts functioning from today in the State
Bengaluru, Nov. 17, 2020 (www.justkannada.in): Colleges which were closed down from the last eight months due to lockdown because of Covid-19 pandemic have started functioning from today. Students should mandatorily follow the precautionary guidelines to attend the classes.
Along with classroom teaching online and offline teaching also has been continued. All the colleges have been sanitized and students have to produce Covid negative report along with parents permission letter compulsorily to gain entry. degree-d-post-graduate-colleges-will-commence-today

Key words: Degree -d Post Graduate –Colleges- will- commence – today.