Friday, September 18, 2026

BDA Apartments

ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ BDA JK_Adv BDA Adv
Home Crime ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ 

ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ 

ಚಾಮರಾಜನಗರ,ಡಿಸೆಂಬರ್,03,2020(www.justkannada.in) : ಜಿಂಕೆ ಬೇಟೆಯಾಡಿ ಮಾಂಸ ಮಾರಾಟಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.logo-justkannada-mysore

ಹನೂರು ತಾಲೂಕಿನ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‌ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಟ್ಟಿ ತಾಲೂಕಿನ ನಟಾರಪಾಳ್ಯ ಗ್ರಾಮದ ನಿವಾಸಿ ಶಕ್ತಿ ಬಿನ್ ಗೋಪಾಲ ಬಂಧಿತ ಆರೋಪಿ. ವ್ಯಕ್ತಿಯೊಬ್ಬ ಜಿಂಕೆ ಮಾಂಸ ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Deer,Meat,Sale,arrest,accused

ಸದ್ಯ, 25 ಕೆಜಿ ಜಿಂಕೆ ಮಾಂಸ, ಒಂದು ಬೈಕ್, ಎರಡು ಚೂರಿ, ಒಂದು ಮೊಬೈಲ್, ಒಂದು ನಾಡ ಬಂದೂಕು, ಒಂದು ಬ್ಯಾಟರಿ ವಶಕ್ಕೆ ಪಡೆದು‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

key words : Deer-Meat-Sale-arrest-accused