Sunday, August 23, 2026

BDA Apartments

Home Front Page 7,500 ಎನ್’ಸಿಸಿ ಕೆಡೆಟ್ಸ್ ತೆಗೆದುಕೊಳ್ಳಲು ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

7,500 ಎನ್’ಸಿಸಿ ಕೆಡೆಟ್ಸ್ ತೆಗೆದುಕೊಳ್ಳಲು ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆಬ್ರವರಿ 06,2022 (www.justkannada.in): ರಾಜ್ಯ ಸರ್ಕಾರವು 7,500 ಹೊಸ ಕೆಡೆಟ್ಸ್ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಕೆಡೆಟ್ಗಳಿಗೆ ರಾಜ್ಯದಿಂದ ಮಿಲಿಟ್ರಿ ಸಮಾನವಾದ ಶಿಕ್ಷಣ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಓಬವ್ವ ಆತ್ಮ ರಕ್ಷಣಾ ಕಲಾ ಕೌಶಲ್ಯ ತರಬೇತಿ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, 44 ಸಾವಿರ ಶಾಲೆಗಳಲ್ಲಿ ಎನ್‌ಸಿಸಿ ಇದೆ. NCC ಕೆಡೆಟ್‌ಗಳ ಕಾರ್ಯಕ್ರಮ ಶೈಲಿ ಬದಲಾಯಿಸಿ. ಹೊಸ ಪರಿವರ್ತನೆಗೆ ರಕ್ಷಣಾ ಮಂತ್ರಿಗಳ ಅನುಮತಿ ಕೇಳಿದ್ದೇವೆ. 50 ಸಾವಿರಕ್ಕೂ ಹೆಚ್ಚು ಕೆಡೆಟ್ಗಳಿಗೆ ರಾಜ್ಯದಿಂದ ಮಿಲಿಟ್ರಿ ಸಮಾನವಾದ ಶಿಕ್ಷಣ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟ ಮಾಡಿದ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮ್ಮಲ್ಲಮ್ಮ, ಒನಕೆ ಓಬವ್ವ, ಇವರು ಪುರುಷರನ್ನೂ ಮೀರಿಸುವ ಪೌರುಷ ಹೊಂದಿದ್ದರು ಎಂದರು.