ಸಿದ್ದರಾಮಯ್ಯರನ್ನ ಕೆಳಗಿಳಿಸಿ ಯಾರನ್ನ ಸಿಎಂ ಮಾಡಬೇಕೆಂಬ ಚರ್ಚೆ ಮತ್ತೆ ಶುರುವಾಗಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.  

ಹುಬ್ಬಳ್ಳಿ,ನವೆಂಬರ್,30,2023(www.justkannada.in): ಮುಖ್ಯಮಂತ್ರಿ ಸ್ಥಾನದಿಂದ  ಸಿದ್ದರಾಮಯ್ಯರನ್ನ ಕೆಳಗಿಳಿಸಿ ಯಾರನ್ನ ಸಿಎಂ ಮಾಡಬೇಕೆಂಬ ಚರ್ಚೆ ಮತ್ತೆ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ.  ಕಾಂಗ್ರೆಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಉಂಟಾಗಿದೆ.  ಬಿಆರ್ ಪಾಟೀಲ್, ಬಸವರಾಜ  ರಾಯರೆಡ್ಡಿ,  ಸಚಿವ ಸತೀಶ್ ಜಾರಕಿಹೊಳಿ ಗುಂಪುಗಾರಿಕೆ ಇದೆ. ಇದನ್ನ  ಸರಿಮಾಡುವ ಸಂಭಾಳಿಸುವ ನಾಯಕತ್ವ ಇಲ್ಲ ಅಲ್ಲಿ ಇಲ್ಲ ಎಂದು ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ತಿಕ್ಕಾಟ ನಡೆಯುತ್ತಿದೆ.  ಜಗಳ ಅತಿರೇಖಕ್ಕೆ  ಹೋಗಿ ಆಡಳಿತದ ಮೇಳೆ ಪರಿಣಾಮ ಬೀರಿದೆ. ಸಿದ್ದರಾಮಯ್ಯ ಯಾವಾಗ ಕೆಳಗೆ ಇಳಿಸಬೇಕೆಂದು ಚರ್ಚೆ ನಡೆಯುತ್ತಿದೆ.  ಯಾರನ್ನ ಸಿಎಂ ಮಾಡಬೇಕೆಂದು ಮತ್ತೆ ಚರ್ಚೆ ಶುರುವಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words:  debate – replace -Siddaramaiah – CM – Union Minister -Prahlad Joshi.