ಕೆರೆಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಾವು.

ಬೀದರ್,ಅಕ್ಟೋಬರ್,3,2021(www.justkannada.in): ಕೆರೆಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.  

ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕಿನ ಘೋಡವಾಡಿಯಲ್ಲಿ ಈ ಘಟನೆ ನಡೆದಿದೆ. ಮಹಮ್ಮದ್ ಜುಲೇದ್, ಸಲೀಂಖಾನ್, ಸಯ್ಯದ್ ಉಸ್ಮಾನ್, ಸೈಯ್ಯದ್ ಮೃತಟ್ಟವರು. ಮೃತರು ಹೈದರಾಬಾದ್ ನ ಬೊರಬಂಡಾ ನಿವಾಸಿಗಳು ಎನ್ನಲಾಗಿದೆ.

ದರ್ಗಾ ದರ್ಶನಕ್ಕಾಗಿ ಬಂದಿದ್ದ ನಾಲ್ವರು ಈಜಲು ಕೆರೆಗೆ ಇಳಿದಿದ್ದರು. ಈ ವೇಳೆ ನೀರುಪಾಲಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words:  deaths – four – same family – swimming – lake-bidar