ಪತ್ನಿ ಕೊಂದಿದ್ದ ಪತಿಗೆ ಮರಣ ದಂಡನೆ: ಮೈಸೂರಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು

ಮೈಸೂರು, ನವೆಂಬರ್ 14, 2019 (www.justkannada.in): ಪತ್ನಿಯ ಜೊತೆಗೆ ಸಂಬಂಧಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ. ಮೈಸೂರಿನ ಉದಯಗಿರಿಯ ಬೀಡಿ ಕಾಲೋನಿ ನಿವಾಸಿ ಇಷಾಕ್ ಪಾಷಾ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಕಳೆದ 2009ರಲ್ಲಿ ನಡೆದಿದ್ದ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದ್ಯ ಕುಡಿಯಲು ಹಣ ಕೊಡದ ಪತ್ನಿ ಸಿದ್ದಿಕಿಬಾನುಳನ್ನು ಭೀಕರವಾಗಿ ಕೊಂದಿದ್ದ. ಕೃತ್ಯ ನಡೆದ ಸಂದರ್ಭದಲ್ಲಿ ಬಂದ ಪತ್ನಿಯ ಸಂಬಂಧಿ ಸುರಯಾಬಾನುಳನ್ನೂ ಸಹ ಇಷಾಕ್ ಪಾಷ ಕೊಂದಿದ್ದ. ಬಳಿಕ ಪರಾರಿಯಾಗಿ 8 ವರ್ಷಗಳ ನಂತರ ಸಿಕ್ಕಿಬಿದ್ದಿದ್ದ.

ನ್ಯಾಯಾಧೀಶರಾದ ಹೊಸಮನೆ ಪುಂಡಲೀಕ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕರಾದ ಪಿ. ಪಿ. ನಾಗರಾಜು ವಾದ ಮಂಡಿಸಿದ್ದರು.