Saturday, August 8, 2026

BDA Apartments

Home Front Page ಕೋವಿಡ್ ಲಸಿಕೆ ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ.

ಕೋವಿಡ್ ಲಸಿಕೆ ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ.

ಮೈಸೂರು,ನವೆಂಬರ್,15,2021(www.justkannada.in): ಕೋವಿಡ್ ಲಸಿಕೆ ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆ  ಹಿನ್ನಲೆ. ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಗಾರದ ಬಳಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ವೈದ್ಯರು, ಸರ್ಕಾರದ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ವೈದ್ಯರ ನಿರ್ಲಕ್ಷ್ಯತನದಿಂದ ಸುರೇಶ್ ಸಾವಿಗೀಡಾಗಿದ್ದಾನೆಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮೈಸೂರಿನ ಅಶೋಕಪುರಂ ಸುರೇಶ್ (39)  ಕೋವಿಡ್ ಲಸಿಕೆ ಪಡೆದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸುರೇಶ್ ಸಾವನ್ನಪ್ಪಿದ್ದು  ಲಸಿಕೆಗೂ ಅಸ್ವಸ್ಥಗೊಂಡಿದ್ದಕ್ಕೂ ಸಂಬಂಧ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ಕೋವಿಡ್ ಲಸಿಕೆ ಪಡೆದು ತಮ್ಮ ಮಗ ಅಸ್ವಸ್ಥನಾಗಿದ್ದಾನೆಂದು ಮಹದೇವಮ್ಮ ಅಶೋಕಪುರಂ ಠಾಣೆಗೆ ನೀಡಿದ್ದು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕೆ.ಆರ್ ಆಸ್ಪತ್ರೆ  ಶವಗಾರದ ಬಳಿ ಪ್ರತಿಭಟನೆ ನಡೆಸಿದರು.

Key words: Death – man – sick – covid vaccine-Protest- against- doctors.