Tuesday, September 29, 2026

BDA Apartments

ಐದು ಹುಲಿಗಳ ಸಾವು ಪ್ರಕರಣ: ಇಬ್ಬರ ಬಂಧನ BDA JK_Adv BDA Adv
Home Crime ಐದು ಹುಲಿಗಳ ಸಾವು ಪ್ರಕರಣ: ಇಬ್ಬರ ಬಂಧನ

ಐದು ಹುಲಿಗಳ ಸಾವು ಪ್ರಕರಣ: ಇಬ್ಬರ ಬಂಧನ

ಚಾಮರಾಜನಗರ, ಜೂನ್​, 28,2025 (www.justkannada.in):  ಮಲೆಮಹದೇಶ್ವರ ಬೆಟ್ಟದ  ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮಾದ ಅಲಿಯಾಸ್ ಮಾದುರಾಜು ಹಾಗೂ ನಾಗರಾಜ್ ಬಂಧಿತರು. ಸದ್ಯ ಮೀಣ್ಯಂ ಅರಣ್ಯ ಭವನದಲ್ಲಿ  ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳಿಂದ  ಇಬ್ಬರ ವಿಚಾರಣೆ ನಡಲಾಗುತ್ತಿದೆ. ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎನ್ನುವುದು  ಖಚಿತವಾಗಿತ್ತು. ಆದರೆ ವಿಷವಿಟ್ಟವರು ಯಾರು ಎಂಬುದು ಗೊತ್ತಾಗಿರಲಿಲ್ಲ.

ಘಟನೆ ಸಂಬಂಧ ತನಿಖೆ ನಡೆಸಲು ತನಿಖಾ ತಂಡ ರಚಿಸಲಾಗಿದ್ದು ಇದೀಗ ಮಾದುರಾಜು ಹಾಗೂ ನಾಗರಾಜ್  ಬಂಧಿತರಾಗಿದ್ದಾರೆ. ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು. ಈ ಬಗ್ಗೆ  ಮಾದುರಾಜು ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದ. ಬಳಿಕ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧರಿಸಿ ಹುಲಿ ಕೊಲ್ಲಲು ಕ್ರಿಮಿನಾಶಕ ಕೂಡ ತಂದಿದ್ದರು. ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು ಎಂಬ ವಿಚಾರವನ್ನು ಇಬ್ಬರು  ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.vtu

Key words: Two,  arrested, connection, death, five tigers