ಉದ್ಯಮಿ ಸಿದ್ಧಾರ್ಥ್ ಸಾವು ಹಿನ್ನೆಲೆ: ಹುಟ್ಟೂರು ಚೇತನಹಳ್ಳಿ ಸುತ್ತಮುತ್ತ ಬಂದ್…

ಚಿಕ್ಕಮಗಳೂರು,ಜು,31,2019(www.justkannada.in):  ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸವು ಹಿನ್ನೆಲೆ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚೇತನಹಳ್ಳಿ ಸುತ್ತಮುತ್ತ ಸ್ವಯಂಘೋಷಿತ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಜಿ ಸಿಎಂ ಎಸ್,ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಅವರ ಮೃತದೇಹ ನೇತ್ರಾವತಿ ನದಿಯನ್ನ ಹಿನ್ನೀರಿನಲ್ಲಿ  ಪತ್ತೆಯಾಗಿತ್ತು. ನಂತರ ಮೃತದೇಹವನ್ನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ಇದೀಗ ಚಿಕ್ಕಮಗಳೂರಿಗೆ ಪಾರ್ಥೀವ ಶರೀರ ತರಲಾಗುತ್ತಿದೆ.

ಈ ನಡುವೆ ಸಿದ್ಧರ್ಥ್ ಅವರ ಹುಟ್ಟೂರು ಚೇತನಹಳ್ಳಿಯ ಸುತ್ತಮುತ್ತ ಅಂಗಡಿ ಮುಂಗಟ್ಟು  ಸ್ವಯಂಘೋಷಿತ್ ಬಂದ್ ಮಾಡಿ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಚೇತನಹಳ್ಳಿ ಸುತ್ತಮುತ್ತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನಲಾಗುತ್ತಿದೆ.

key words: death –businessman- Siddharth- Bandh -Chetanahalli.