“ಅನಾರೋಗ್ಯದಿಂದ ಮೃತಪಟ್ಟ ಹಿರಿಯ ಪತ್ರಕರ್ತ ಎಚ್.ಆರ್.ಹರೀಶ್ ಕೋಟೆ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ” : ಸಿಎಂ ಬಿ.ಎಸ್.ವೈ ಮಂಜೂರು

ಬೆಂಗಳೂರು,ಜನವರಿ,31,2021 : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ಮನವಿ ಮೇರೆಗೆ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಹಿರಿಯ ಪತ್ರಕರ್ತ ಎಚ್.ಆರ್.ಹರೀಶ್ ಕೋಟೆ ಅವರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿದ್ದಾರೆ.jk

ಹರೀಶ್ ಕೋಟೆ ಅವರು ಹಾಸನಮಿತ್ರ, ಜನಮಿತ್ರ, ಜೀ ಟೀವಿ, ಅಮೋಘ ಟಿವಿ ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

ಹರೀಶ್ ಕುಟುಂಬ ಅವರ ಚಿಕಿತ್ಸೆಗಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿತ್ತು. ಸಂಕಷ್ಟದಲ್ಲಿರುವ ಹರೀಶ್ ಕುಟುಂಬಕ್ಕೆ ನೆರವು ನೀಡುವಂತೆ ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು, ರಾಜ್ಯ ಸಂಘಕ್ಕೆ ಮನವಿ ಮಾಡಿತ್ತು.Dead,Senior journalist,H.R.Harish,family,2 lakhsSolution,CM B.S.Y,Granted

ಈ ಹಿನ್ನೆಲೆ ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ಮಂಜೂರು ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

key words : Dead-Senior journalist-H.R.Harish-family-2 lakhs
Solution-CM B.S.Y-Granted