Sunday, September 20, 2026

BDA Apartments

Home Front Page ದಲಿತ ಡಿಸಿಎಂ ರೇಸ್ ನಲ್ಲಿ ನಾನೇನು ಇಲ್ಲ: ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ- ಶಾಸಕ...

ದಲಿತ ಡಿಸಿಎಂ ರೇಸ್ ನಲ್ಲಿ ನಾನೇನು ಇಲ್ಲ: ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ- ಶಾಸಕ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಮೇ,18,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಮಧ್ಯೆ ಡಿಸಿಎಂ ಸ್ಥಾನ ಸಚಿವಸ್ಥಾನಕ್ಕಾಗಿ ಈಗಾಗಲೇ ಲಾಬಿ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಎಚ್ ಮುನಿಯಪ್ಪ, ಡಿಸಿಎಂ ರೇಸ್ ನಲ್ಲಿ ನಾನೇನು ಇಲ್ಲ.  ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ ಎಂದು ಹೇಳಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಮಾತನಾಡಿದ ಕೆ.ಹೆಚ್ ಮು‌ನಿಯಪ್ಪ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದಲಿತ ಡಿಸಿಎಂ ರೇಸ್​ನಲ್ಲಿ ನಾನೇನು ಇಲ್ಲ. ನಾನು ದೇಶದಲ್ಲಿ ಮಂತ್ರಿಯಾಗಿದ್ದವನು. ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ. ನೀವು ರಾಜ್ಯದಲ್ಲಿ ಸ್ಪರ್ಧೆ ಮಾಡಿ ಅಂತ ಹೈಕಮಾಂಡ್ ಹೇಳಿತ್ತು. ಅದರಂತೆ ನಾನು ಸ್ವರ್ಧಿಸಿ ಗೆದ್ದೀದ್ದೇನೆ. ಉಳಿದದ್ದು ಹೈಕಮಾಂಡ್ ​ಗೆ ಬಿಟ್ಟದ್ದು ಎಂದು ತಿಳಿಸಿದರು.ದಲಿತ ಡಿಸಿಎಂ ರೇಸ್ ನಲ್ಲಿ ನಾನೇನು ಇಲ್ಲ kh muniyappa kh

ಹೈಕಮಾಂಡ್ ಸೂತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೆ.ಎಚ್ ಮುನಿಯಪ್ಪ,  ನಾವು ಏನು ಹೇಳಲು ಆಗುವುದಿಲ್ಲ ಎಂದರು.

Key words: DCM-Minister position-MLA-KH Muniyappa